ಕರ್ನಾಟಕ

karnataka

ETV Bharat / bharat

ದೇಶದ ಜನರಿಗೆ 'ಕೊರೊನಾ ವ್ಯಾಕ್ಸಿನ್' ಉಚಿತವಾಗಿ ಸಿಗಲಿ: ಟ್ವೀಟ್ ಮೂಲಕ ಕೇಜ್ರಿವಾಲ್ ಮನವಿ​! - ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್​

ಮಹಾಮಾರಿ ಕೊರೊನಾ ವೈರಸ್​ ವಿರುದ್ಧ ಹೋರಾಡಲು ಈಗಾಗಲೇ ಎರಡು ವ್ಯಾಕ್ಸಿನ್​ಗಳಿಗೆ ಅನುಮತಿ ನೀಡಲಾಗಿದ್ದು, ಇದರ ಬೆನ್ನಲ್ಲೇ ದೆಹಲಿ ಸಿಎಂ ಕೇಂದ್ರದ ಬಳಿ ಮಹತ್ವದ ಮನವಿ ಮಾಡಿಕೊಂಡಿದ್ದಾರೆ.

Arvind Kejriwal
Arvind Kejriwal

By

Published : Jan 9, 2021, 3:05 PM IST

ನವದೆಹಲಿ: ದೇಶದಲ್ಲಿ ತುರ್ತು ಪರಿಸ್ಥಿತಿ ವೇಳೆ ಕರೊನಾ ವೈರಸ್​ ವಿರುದ್ಧ ಬಳಕೆ ಮಾಡುವ ಉದ್ದೇಶದಿಂದ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್​ಗೆ ಅನುಮತಿ ನೀಡಲಾಗಿದ್ದು, ನಿನ್ನೆ ಇದಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಎರಡನೇ ಹಂತದ ಡ್ರೈರನ್​ ಯಶಸ್ವಿಯಾಗಿ ನಡೆದಿದೆ.

ಬರುವ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಕೋವಿಡ್ ಲಸಿಕೆ ಹಂಚಿಕೆ ವಿಚಾರವಾಗಿ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಸಿಎಂಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ​ ನಡೆಸಲಿದ್ದಾರೆ. ಇದರ ಬೆನ್ನಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಕೇಂದ್ರದ ಬಳಿ ಮಹತ್ವದ ಮನವಿ ಮಾಡಿಕೊಂಡಿದ್ದಾರೆ.

ಓದಿ: ಲಸಿಕೆಗೆ ಅನುಮೋದನೆ: ವಿಜ್ಞಾನಿಗಳು, ವೈದ್ಯರಿಗೆ ಸಿಎಂ ಕೇಜ್ರಿವಾಲ್ ಅಭಿನಂದನೆ

ದೇಶದ ಎಲ್ಲರಿಗೂ ಉಚಿತವಾಗಿ ಕೊರೊನಾ ವ್ಯಾಕ್ಸಿನ್ ನೀಡಬೇಕು ಎಂದು ಕೇಜ್ರಿವಾಲ್​ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ. ಉಚಿತವಾಗಿ ಕೊರೊನಾ ಲಸಿಕೆ ನೀಡುವುದರಿಂದ ಅನೇಕರ ಪ್ರಾಣ ಉಳಿದಂತಾಗುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ.

ಇನ್ನು ಕಳೆದ ವಾರ ದೆಹಲಿಯಲ್ಲಿರುವ ಎಲ್ಲರಿಗೂ ಉಚಿತವಾಗಿ ಕೋವಿಡ್​ ವ್ಯಾಕ್ಸಿನ್​ ನೀಡುವುದಾಗಿ ಕೇಜ್ರಿವಾಲ್​ ಸರ್ಕಾರ ಘೋಷಣೆ ಮಾಡಿದೆ.

ABOUT THE AUTHOR

...view details