ಕರ್ನಾಟಕ

karnataka

ETV Bharat / bharat

ಬಿಎಸ್ಎಫ್ ಶಿಬಿರದಲ್ಲಿ ಘರ್ಷಣೆ: ಸಬ್​ ಇನ್ಸ್​ಪೆಕ್ಟರ್​ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಯೋಧ - ಬಿಎಸ್ಎಫ್ ಶಿಬಿರದಲ್ಲಿ ಘರ್ಷಣೆ

ಹೆಡ್ ಕಾನ್‌ಸ್ಟೆಬಲ್ ಶಿವ ಚಂದರ್ ರಾಮ್, ತಮ್ಮ ಹಿರಿಯ ಮತ್ತು ಸಬ್ ಇನ್ಸ್‌ಪೆಕ್ಟರ್ ಆರ್ ಪಿ ಸಿಂಗ್ ಅವರನ್ನು ಗುಂಡು ಹಾರಿಸಿ ಕೊಂದಿದ್ದಾನೆ. ಬಳಿಕ ತಾನೂ ಕೂಡಾ ಸೇವಾ ಶಸ್ತ್ರಾಸ್ತ್ರ ಬಳಸಿ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ ಎಂದು ಗಡಿ ಕಾವಲು ಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

killing self
ಬಿಎಸ್ಎಫ್ ಶಿಬಿರದಲ್ಲಿ ಘರ್ಷಣೆ

By

Published : May 3, 2020, 3:54 PM IST

ಶ್ರೀಗಂಗಾನಗರ :ರಾಜಸ್ಥಾನದ ಬಿಎಸ್‌ಎಫ್ ಶಿಬಿರದಲ್ಲಿ ನಡೆದ ಜಗಳದಲ್ಲಿ ಬಿಎಸ್​ಎಫ್​ ಯೋಧ ತನಗಿಂತ ಹಿರಿಯ ಸಬ್ ಇನ್ಸ್‌ಪೆಕ್ಟರ್‌ನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಿಗ್ಗೆ 6:30 ರ ಸುಮಾರಿಗೆ ರಾಜಸ್ಥಾನದ ಶ್ರೀಗಂಗನಗರ ಜಿಲ್ಲೆಯ ರೇಣುಕಾ ಎಂಬಲ್ಲಿ ಈ ಘಟನೆ ನಡೆದಿದ್ದು, ಅಲ್ಲಿ 125ನೇ ಬೆಟಾಲಿಯನ್ ಪಡೆಯನ್ನು ನಿಯೋಜಿಸಲಾಗಿತ್ತು. ಹೆಡ್ ಕಾನ್‌ಸ್ಟೆಬಲ್ ಶಿವ ಚಂದರ್ ರಾಮ್, ತಮ್ಮ ಹಿರಿಯ ಮತ್ತು ಸಬ್ ಇನ್ಸ್‌ಪೆಕ್ಟರ್ ಆರ್ ಪಿ ಸಿಂಗ್ ಅವರನ್ನು ಗುಂಡು ಹಾರಿಸಿ ಕೊಂದಿದ್ದಾನೆ. ಬಳಿಕ ತಾನೂಕೂಡಾ ಸೇವಾ ಶಸ್ತ್ರಾಸ್ತ್ರ ಬಳಸಿ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ ಎಂದು ಗಡಿ ಕಾವಲು ಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಘರ್ಷಣೆಗೆ ಕಾರಣ ತಿಳಿಯಲು ಹಿರಿಯ ಅಧಿಕಾರಿಗಳು ಘಟನಾ ಸ್ಥಳದಲ್ಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ABOUT THE AUTHOR

...view details