ಕರ್ನಾಟಕ

karnataka

ಭಾರತದಿಂದ ಸ್ವದೇಶಕ್ಕೆ ವಾಪಸ್​ ಆದ 112 ಫ್ರೆಂಚ್ ನಾಗರಿಕರು

By

Published : Apr 4, 2020, 9:51 PM IST

ಪ್ರವಾಸಿಗರಾಗಿ ಭಾರತಕ್ಕೆ ಬಂದು ನಂತರ ಲಾಕ್​​ಡೌನ್​ ಘೋಷಣೆಯಾಗಿದ್ದರಿಂದ ಇಲ್ಲೇ ಉಳಿದಿದ್ದ ತನ್ನ 112 ಪ್ರಜೆಗಳನ್ನು ಫ್ರಾನ್ಸ್​ ವಿಶೇಷ ವಿಮಾನದ ಮೂಲಕ ಮರಳಿ ದೇಶಕ್ಕೆ ಕರೆದೊಯ್ದಿದೆ.

France evacuates 112 stranded citizens from Kerala
France evacuates 112 stranded citizens from Kerala

ಕೊಚ್ಚಿ (ಕೇರಳ): ಭಾರತದಲ್ಲಿ ಸಿಲುಕಿದ್ದ ತನ್ನ 112 ಪ್ರಜೆಗಳನ್ನು ಫ್ರಾನ್ಸ್​ ಶನಿವಾರ ಮರಳಿ ತನ್ನ ದೇಶಕ್ಕೆ ಕರೆದೊಯ್ದಿದೆ. ಕೇರಳ ಹಾಗೂ ತಮಿಳುನಾಡುಗಳಲ್ಲಿದ್ದ 112 ಪ್ರಜೆಗಳನ್ನು ಏರ್​ ಇಂಡಿಯಾದ ವಿಶೇಷ ವಿಮಾನ ಮೂಲಕ ಫ್ರಾನ್ಸ್​ಗೆ ಕರೆದೊಯ್ಯಲಾಯಿತು.

ಕೊರೊನಾ ವೈರಸ್​ ಲಾಕ್​ಡೌನ್ ಕಾರಣದಿಂದ ಭಾರತದಲ್ಲೇ ಉಳಿಯುವಂತಾಗಿದ್ದ ತನ್ನ ನಾಗರಿಕರನ್ನು ದೇಶಕ್ಕೆ ಕರೆದೊಯ್ಯಲು ಅನುವು ಮಾಡಿಕೊಡಬೇಕೆಂದು ಫ್ರಾನ್ಸ್​ ರಾಯಭಾರ ಕಚೇರಿ ಕೇರಳ ಸರ್ಕಾರಕ್ಕೆ ಮನವಿ ಮಾಡಿತ್ತು. ಫ್ರಾನ್ಸ್​ನ ಈ ನಾಗರಿಕರು ಪ್ರವಾಸ ಮಾಡಲು ಹಾಗೂ ಕೇರಳದಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯಲು ಭಾರತಕ್ಕೆ ಆಗಮಿಸಿದ್ದರು.

ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ಯಾರಿಸ್​ಗೆ ತೆರಳುವ ಮುನ್ನ ಈ ಎಲ್ಲ ಪ್ರವಾಸಿಗರ ಆರೋಗ್ಯ ತಪಾಸಣೆ ನಡೆಸಲಾಯಿತು. ತನ್ನ ಪ್ರಜೆಗಳನ್ನು ವಾಪಸ್​ ಕರೆಸಿಕೊಳ್ಳಲು ಫ್ರೆಂಚ್​ ಸರಕಾರ ಏರ್ ಇಂಡಿಯಾ ವಿಮಾನವನ್ನು ಬಾಡಿಗೆಗೆ ಪಡೆದುಕೊಂಡಿತ್ತು.

ಶುಕ್ರವಾರದಂದು ಗಲ್ಫ್ ರಾಷ್ಟ್ರ ಓಮನ್​ ಕೊಚ್ಚಿ ವಿಮಾನ ನಿಲ್ದಾಣದಿಂದ ತನ್ನ 46 ಪ್ರಜೆಗಳನ್ನು ಓಮನ್​ ಏರ್ ಫ್ಲೈಟ್​ ಮೂಲಕ ಕರೆದೊಯ್ದಿದೆ.

ABOUT THE AUTHOR

...view details