ಕರ್ನಾಟಕ

karnataka

ETV Bharat / bharat

ಗೆಳೆಯನ ಹುಟ್ಟುಹಬ್ಬ ಆಚರಿಸಲು ಹೋದ ನಾಲ್ವರು ನೀರುಪಾಲು...! - youths died news

ಗೆಳೆಯನ ಹುಟ್ಟುಹಬ್ಬ ಆಚರಿಸಲು ತೆರಳಿದ್ದ ಸ್ನೇಹಿತರ ಪೈಕಿ ನಾಲ್ವರು ನೀರು ಪಾಲಾಗಿರುವ ಘಟನೆ ಶನಿವಾರ ಸಂಜೆ ಮುಲುಗು ಜಿಲ್ಲೆಯ ಗೋದಾವರಿ ನದಿಯಲ್ಲಿ ನಡೆದಿದೆ.

Telangana
ನಾಲ್ವರು ನೀರುಪಾಲು

By

Published : Nov 15, 2020, 5:37 PM IST

ತೆಲಂಗಾಣ (ಹೈದರಾಬಾದ್​): ಗೆಳೆಯನ ಹುಟ್ಟುಹಬ್ಬ ಆಚರಿಸಲು ತೆರಳಿದ್ದ ಸ್ನೇಹಿತರ ಪೈಕಿ ನಾಲ್ವರು ನೀರು ಪಾಲಾಗಿರುವ ಘಟನೆ ಮುಲುಗು ಜಿಲ್ಲೆಯ ಗೋದಾವರಿ ನದಿಯಲ್ಲಿ ನಡೆದಿದೆ.

ಗೆಳೆಯನ ಹುಟ್ಟುಹಬ್ಬ ಆಚರಿಸಲು ತೆರಳಿದ್ದ ನಾಲ್ವರು ಸ್ನೇಹಿತರು ಗೋದಾವರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಶನಿವಾರ ಸಂಜೆ ಈ ಘಟನೆ ನಡೆದಿದ್ದು, ತುಮ್ಮ ಕಾರ್ತಿಕ್​ (19), ಸಂಕೆ ಶ್ರೀಕಾಂತ್​ (20), ಕೊಡಿರೆಕ್ಕಲ ಅನ್ವೇಶ್​ (20) ಮತ್ತು ರಾಯವರಪು ಪ್ರಕಾಶ್​ (19) ಮೃತ ಪಟ್ಟಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಸ್ನೇಹಿತನ ಹುಟ್ಟುಹಬ್ಬದಂದು ಸಂತೋಷಕೂಟವನ್ನು ಆಚರಿಸಲು ಒಟ್ಟು 20 ಯುವಕರು ರಂಗರಾಜಪುರಂ ಗ್ರಾಮದ ಗೋದಾವರಿ ನದಿಯ ದಡಕ್ಕೆ ಹೋಗಿದ್ದರು ಎಂದು ತಿಳಿದು ಬಂದಿದೆ. ಅದರಲ್ಲಿ ನಾಲ್ವರು ನದಿಯಲ್ಲಿ ಈಜಲು ಹೋಗಿದ್ದು, ನೀರಿನ ಆಳದಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ.

ಇನ್ನು ಮೀನುಗಾರರ ಸಹಾಯದಿಂದ ಶವಗಳನ್ನು ಮೇಲೆತ್ತುವ ಕಾರ್ಯಾಚರಣೆಯನ್ನು ವೆಂಕಟಪುರಂ ಸಿಐ ಶಿವಪ್ರಸಾದ್ ವಹಿಸಿಕೊಂಡಿದ್ದಾರೆ.

ABOUT THE AUTHOR

...view details