ಕೈಮುರ್(ಬಿಹಾರ):ಟ್ಯೂಷನ್ಗೆಂದು ತೆರಳುತ್ತಿದ್ದ ಬಾಲಕಿಯ ಮೇಲೆ ನಾಲ್ಕು ಜನ ಕಾಮುಕರ ಗುಂಪೊಂದು ಅತ್ಯಾಚಾರವೆಸಗಿರುವ ಘಟನೆಯೊಂದು ಕೈಮುರ್ ನಗರದ ಮೊಹಾನಿಯದಲ್ಲಿ ನಡೆದಿದೆ.
10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿವೋರ್ವಳು ಸಂಜೆ ಟ್ಯೂಷನ್ಗೆಂದು ತೆರಳುತ್ತಿದ್ದ ವೇಳೆ ನಾಲ್ವರ ಗುಂಪೊಂದು ಕಾರಿನಲ್ಲಿ ಬಂದು ಆಕೆಯನ್ನು ಟ್ಯೂಷನ್ಗೆ ಲಿಫ್ಟ್ ನೀಡುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾರೆ.