ಕರ್ನಾಟಕ

karnataka

ETV Bharat / bharat

ಪುಣೆಯಲ್ಲಿ ನಾಲ್ವರು ಕೊರೊನಾ ಶಂಕಿತರು ಎಸ್ಕೇಪ್! - ಕೋವಿಡ್ -19 ಶಂಕಿತ

ಪ್ರವೇಶ ಪ್ರಕ್ರಿಯೆಗಾಗಿ ಕ್ವಾರಂಟೈನ್ ಕೇಂದ್ರದ ಪ್ರವೇಶ ದ್ವಾರದಲ್ಲಿ ಆಂಬ್ಯುಲೆನ್ಸ್ ನಿಲ್ಲಿಸಿದ್ದಾಗ, ನಾಲ್ವರು ಕೊರೊನಾ ಶಂಕಿತರು ಓಡಿಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

escape

By

Published : Apr 27, 2020, 1:00 PM IST

ಪುಣೆ (ಮಹಾರಾಷ್ಟ್ರ):ಪುಣೆ ನಗರದಲ್ಲಿ ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ಯುವಾಗ ಕೋವಿಡ್ -19 ಶಂಕಿತ ನಾಲ್ವರು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

"ಮಹಿಳೆ ಸೇರಿದಂತೆ ನಾಲ್ಕು ಜನರೂ ಕೊರೊನಾ ವೈರಸ್ ಸೋಂಕಿತನ ದ್ವಿತೀಯ ಸಂಪರ್ಕಿಗಳಾಗಿದ್ದರು. ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಸಿಂಹಗಢ ರಸ್ತೆ ಪ್ರದೇಶದಲ್ಲಿನ ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ಯಲಾಗುತ್ತಿತ್ತು" ಎಂದು ಸಿಂಹಗಢ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಪ್ರವೇಶ ಪ್ರಕ್ರಿಯೆಗಾಗಿ ಕೇಂದ್ರದ ಪ್ರವೇಶ ದ್ವಾರದಲ್ಲಿ ಆಂಬ್ಯುಲೆನ್ಸ್ ನಿಲ್ಲಿಸಿದ್ದಾಗ, ನಾಲ್ವರು ಓಡಿಹೋದರು" ಎಂದು ಪೊಲಿಸರು ತಿಳಿಸಿದ್ದಾರೆ.

ತಪ್ಪಿಸಿಕೊಂಡವರನ್ನು ಪತ್ತೆ ಹಚ್ಚಲು ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details