ಕರ್ನಾಟಕ

karnataka

ETV Bharat / bharat

ಲೆಬನಾನ್​ನಲ್ಲಿ ಮೋದಿ ಹುಟ್ಟು ಹಬ್ಬ ಆಚರಿಸುವುದಾಗಿ ಸುಳ್ಳು ಪ್ರಚಾರ: ನಾಲ್ವರು ಸೆರೆ

ಪ್ರಧಾನಿ ನರೇಂದ್ರ ಮೋದಿ ಫೋಟೋ ಹಾಗೂ ಪ್ರಧಾನ್ ಮಂತ್ರಿ ಜನ್ ಕಲ್ಯಾಣ್ ಯೋಜನೆ ಹೆಸರಿನಲ್ಲಿ ಸುಳ್ಳು ಪ್ರಚಾರ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಪ್ರಧಾನಿ ಮೋದಿಯ ಸಹೋದರ ಪ್ರಹ್ಲಾದ್ ಮೋದಿಯವರ ಹೆಸರನ್ನು ಕೂಡಾ ಬಳಸಿ, ಅವರ ನಕಲಿ ಸಹಿ ಹಾಕಿದ ಆರೋಪವಿದೆ.

By

Published : Sep 19, 2020, 2:41 PM IST

delhi police
delhi police

ನವದೆಹಲಿ:ಪ್ರಧಾನಿ ನರೇಂದ್ರ ಮೋದಿಯವರ 70 ನೇ ಹುಟ್ಟುಹಬ್ಬವನ್ನು ಲೆಬನಾನ್‌ನಲ್ಲಿ ಆಚರಿಸುತ್ತಿರುವುದಾಗಿ ಸುಳ್ಳು ಪ್ರಚಾರ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಪ್ರಧಾನಿ ಮೋದಿ ಫೋಟೋವನ್ನು ಪ್ರಧಾನ್ ಮಂತ್ರಿ ಜನ್ ಕಲ್ಯಾಣ್ ಯೋಜನೆ ಹೆಸರಿನಲ್ಲಿ ಬಳಸಿದ್ದು ಮಾತ್ರವಲ್ಲದೇ, ಅವರ ಸಹೋದರನ ನಕಲಿ ಸಹಿಯನ್ನು ಕೂಡಾ ಬಳಸಲಾಗಿದೆ.

ಈ ಪ್ರಕರಣದಲ್ಲಿ ಸೌತ್ ಅವೆನ್ಯೂ ಪೊಲೀಸರು 2 ಮಹಿಳೆಯರು ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇಡೀ ಪ್ರಕರಣದ ತನಿಖೆಯನ್ನು ವಿಶೇಷ ಸಿಬ್ಬಂದಿಗೆ ಹಸ್ತಾಂತರಿಸಲಾಗಿದೆ.

ಸೌತ್ ಅವೆನ್ಯೂ ಪೊಲೀಸರಿಗೆ ಆರೋಪಿಗಳು ನಕಲಿ ಸಂಸ್ಥೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಬಂದಿದ್ದು, ಪ್ರಧಾನ ಮಂತ್ರಿಯ ಸಾರ್ವಜನಿಕ ಕಲ್ಯಾಣ ಯೋಜನೆ ಪ್ರಚಾರ ಅಭಿಯಾನದ ಹೆಸರಿನಿಂದ ಅವರು ಜನರಿಗೆ ವಂಚನೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಪ್ರಧಾನಿ ಮೋದಿ ಹೆಸರು ಬಳಸಿ ಮೋಸ

ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಕೇರಳದ ಸ್ನೇಹಾ ಚಂದ್ರ ಕುಮಾರ್, ಅಸ್ಸಾಂನ ಪೂರ್ಣಿಮಾ ಮತ್ತು ಪಂಜಾಬ್ ಮೂಲದ ಜತಿನ್ ಶರ್ಮಾ ಎಂದು ಗುರುತಿಸಲಾಗಿದೆ. ವಸಂತ್ ಕುಂಜ್​ನಲ್ಲಿರುವ ಡೇಟ್‌ಸ್ಟಾಪ್ ಹಾಸ್ಟೆಲ್‌ನಲ್ಲಿ ಆರೋಪಿಗಳು ತಂಗಿದ್ದರು.

ಪ್ರಧಾನಿ ಮೋದಿಯ ಚಿತ್ರ ಹಾಗೂ 'ಫ್ರಮ್ ಇಂಡಿಯಾ ಟು ಲೆಬನಾನ್ ವಿದ್ ಲವ್' ಎಂದು ಬರೆದ ಕಿರುಪುಸ್ತಕವನ್ನು ಆರೋಪಿಗಳು ಹೊಂದಿದ್ದರು. ಅದರಲ್ಲಿ ಪ್ರಧಾನ ಮಂತ್ರಿಯ 70ನೇ ಹುಟ್ಟುಹಬ್ಬದಂದು ತಮ್ಮ ಸಂಸ್ಥೆಯ ಮೂಲಕ ಲೆಬನಾನ್‌ ಸ್ಫೋಟದ ಸಂತ್ರಸ್ತರಿಗೆ ಸಹಾಯ ಮಾಡಲು 70 ಟನ್ ಧಾನ್ಯ ವಿತರಿಸಲಾಗುವುದು ಎಂದು ಬರೆಯಲಾಗಿದೆ.

ಆರೋಪಿಗಳು ತಮ್ಮ ಸಂಸ್ಥೆಯ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವನ್ನು ಬಳಸಿದ್ದಲ್ಲದೇ ಅವರ ಸಹೋದರ ಪ್ರಹ್ಲಾದ್ ಮೋದಿಯವರ ಹೆಸರನ್ನು ಕೂಡಾ ಬಳಸಿ ಅವರ ನಕಲಿ ಸಹಿ ಹಾಕಲಾಗಿದೆ. ಆರೋಪಿಗಳು ಜನರನ್ನು ಮೋಸಗೊಳಿಸಲು ಪ್ರಧಾನಿ ಮೊದಿ, ಅವರ ಸಹೋದರ ಮತ್ತು ಬಿಜೆಪಿ ಹೆಸರನ್ನು ಬಳಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದು, ಸಂಪೂರ್ಣ ತನಿಖೆ ನಡೆಯುತ್ತಿದೆ.

ABOUT THE AUTHOR

...view details