ಕರ್ನಾಟಕ

karnataka

ETV Bharat / bharat

ಕಾರು - ಸಾರ್ವಜನಿಕ ಸಾರಿಗೆ ನಡುವೆ ಮುಖಾಮುಖಿ ಡಿಕ್ಕಿ: ನಾಲ್ವರ ದುರ್ಮರಣ - ರಾಜಸ್ಥಾನ ಅಪರಾಧ ಸುದ್ದಿ

ಕಾರು ಮತ್ತು ಸಾರ್ವಜನಿಕ ಸಾರಿಗೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

bus, car accident
ಬಸ್ , ಕಾರು ಅಪಘಾತ

By

Published : Jul 21, 2020, 3:17 PM IST

ಜೋಧಪುರ (ರಾಜಸ್ಥಾನ):ಸಾರ್ವಜನಿಕ ಸಾರಿಗೆ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ, ಐದು ಮಂದಿ ಮೃತಪಟ್ಟಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಜೋಧಪುರ ಜಿಲ್ಲೆಯ ಝಾನ್ವಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ವೇಳೆ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಬಸ್ , ಕಾರು ಅಪಘಾತ

ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಕಾರಿನಲ್ಲಿ ಸಿಲುಕಿದ್ದ ಮೂವರನ್ನು ಕ್ರೇನ್​ ಬಳಸಿ ರಕ್ಷಿಸಲಾಗಿದೆ. ಇವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾರು ಲುನಾವಾಸ್ ಪ್ರದೇಶದಿಂದ ಜೋಧಪುರದ ಕಡೆ ತೆರಳುತ್ತಿತ್ತು, ಸಾರಿಗೆ ಬಸ್ ಬರ್ಮಾರ್ ಕಡೆ ತೆರಳುತ್ತಿದ್ದಾಗ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಸ್ಥಳೀಯರ ಹೇಳಿಕೆ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details