ಗುಂಟೂರು (ಆಂಧ್ರ ಪ್ರದೇಶ): ಗುಂಟೂರು ಜಿಲ್ಲೆಯ ನರಸರಾವುಪೇಟ ಕ್ಷೇತ್ರದ ರೊಂಪಿಚಾರ್ಲಾ ವಲಯದಲ್ಲಿ ಗುರುವಾರ ರಾತ್ರಿ ಕಾರೊಂದು ಕಾಲುವೆಗೆ ಉರುಳಿ ನಾಲ್ವರು ಸಾವನ್ನಪ್ಪಿದ್ದಾರೆ.
ಕಾಲುವೆಗೆ ಉರುಳಿದ ಕಾರು: ನೀರಿನಲ್ಲಿ ಮುಳುಗಿ ನಾಲ್ವರು ಸಾವು - ಕಾಲುವೆಗೆ ಕಾರು ಉರುಳಿ ನಾಲ್ವರು ಸಾವು
ಕಾರೊಂದು ಕಾಲುವೆಗೆ ಉರುಳಿದ ಪರಿಣಾಮ ನೀರಿನಲ್ಲಿ ಮುಳುಗಿ ನಾಲ್ವರು ಸಾವಿಗೀಡಾದ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.
ನೀರಿನಲ್ಲಿ ಮುಳುಗಿ ನಾಲ್ವರು ಸಾವು
ಅದ್ದಂಕಿ - ನರ್ಕಟ್ ಪಲ್ಲಿ ರಸ್ತೆಯ ತಂಗೇಡು ಮಲ್ಲಿ ಕಾಲುವೆಗೆ ಕಾರು ಉರುಳಿ ಬಿದ್ದ ಪರಿಣಾಮ ನೀರಿನಲ್ಲಿ ಮುಳುಗಿ ನಾಲ್ವರು ಪ್ರಾಣ ಬಿಟ್ಟಿದ್ದಾರೆ.
ಈ ಕಾರು ತೆಲಂಗಾಣದಿಂದ ಪ್ರಕಾಶಂ ಜಿಲ್ಲೆಯ ಪಮೂರ್‌ಗೆ ಪ್ರಯಾಣಿಸುತ್ತಿದ್ದಾಗ ರೊಂಪಿಚಾರ್ಲಾ ಮಂಡಲ ಸುಬ್ಬಯಪಾಲಂ ಬಳಿ ಕಾಲುವೆಗೆ ಉರುಳಿ ಬಿದ್ದಿದೆ. ರೊಂಪಿಚಾರ್ಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ನರಸರಾವುಪೇಟ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.