ಕರ್ನಾಟಕ

karnataka

ETV Bharat / bharat

ಯುಪಿಯಲ್ಲಿ ಮತ್ತೊಂದು ವಿಷಪೂರಿತ ಮದ್ಯ ದುರಂತ: ನಾಲ್ವರು ಸಾವು, ಹಲವರು ಅಸ್ವಸ್ಥ - ಪ್ರಯಾಗರಾಜ್ ವಿಷಪೂರಿತ ಮದ್ಯ ಸೇವನೆ ದುರಂತ

ಉ್ತತರಪ್ರದೇಶದಲ್ಲಿ ಮತ್ತೊಂದು ವಿಷಪೂರಿತ ಮದ್ಯ ದುರಂತ ಸಂಭವಿಸಿದೆ. ಪ್ರಯಾಗರಾಜ್ ಜಿಲ್ಲೆಯಲ್ಲಿ ನಾಲ್ವರು ಸಾವಿಗೀಡಾಗಿ, ಹಲವರು ಅಸ್ವಸ್ಥರಾಗಿದ್ದಾರೆ.

four-people-died-after-drinking-poisonous-liquor-in-prayagraj
ಯುಪಿಯಲ್ಲಿ ಮತ್ತೊಂದು ವಿಷಪೂರಿತ ಮದ್ಯ ದುರಂತ

By

Published : Nov 21, 2020, 6:06 AM IST

ಪ್ರಯಾಗರಾಜ್:ಉ್ತತರಪ್ರದೇಶದ ಲಕ್ನೋ ಮತ್ತು ಫಿರೋಜಾಬಾದ್‌ನಲ್ಲಿ ವಿಷಪೂರಿತ ಮದ್ಯ ಸೇವಿಸಿ ಹಲವರು ಸಾವನ್ನಪ್ಪಿದ ಪ್ರಕರಣ ಮಾಸುವ ಮುನ್ನವೇ, ಪ್ರಯಾಗರಾಜ್ ಜಿಲ್ಲೆಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ.

ಪ್ರಯಾಗರಾಜ್ ಜಿಲ್ಲೆಯ ಫುಲ್‌ಪುರ ಪೊಲೀಸ್ ಠಾಣೆ ಪ್ರದೇಶದ ಅಮಿಲಿಯಾ ಗ್ರಾಮದಲ್ಲಿ ವಿಷಪೂರಿತ ಮದ್ಯ ಸೇವಿಸಿ ನಾಲ್ವರು ಸಾವಿಗೀಡಾಗಿದ್ದಾರೆ. ಹಲವರು ಅಸ್ವಸ್ಥರಾಗಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನೊಂದಿಗೆ ಹೋರಾಡುತ್ತಿದ್ದಾರೆ.

ಸುದ್ದಿ ತಿಳಿದು ಡಿ.ಎಂ. ಭಾನು ಗೋಸ್ವಾಮಿ ಹಾಗೂ ಇತರ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಮೃತರೆಲ್ಲ ಸರ್ಕಾರಿ ಮದ್ಯದಂಗಡಿಯಿಂದ ಮದ್ಯ ಖರೀದಿಸಿದ್ದರು ಎನ್ನಲಾಗಿದ್ದು, ಈ ಸಂಬಂಧ ಓರ್ವನನ್ನು ಬಂಧಿಸಲಾಗಿದೆ.

ಘಟನೆಯಲ್ಲಿ ಇದುವರೆಗೆ ನಾಲ್ವರು ಸಾವನ್ನಪ್ಪಿದ್ದಾರೆ. ಅಲ್ಲದೆ ಅನೇಕರ ಜನರ ಸ್ಥಿತಿ ಗಂಭೀರವಾಗಿದೆ. ತನಿಖೆಗೆ ತಂಡಗಳನ್ನು ರಚಿಸಲಾಗುತ್ತಿದೆ ಎಂದು ಡಿ.ಎಂ. ಭಾನು ಗೋಸ್ವಾಮಿ ತಿಳಿಸಿದ್ದಾರೆ.

ABOUT THE AUTHOR

...view details