ಕರ್ನಾಟಕ

karnataka

ETV Bharat / bharat

ನಿಂತಿದ್ದ ಬಸ್​ಗೆ ಗುದ್ದಿದ ಕ್ಯಾಂಟರ್: ನಾಲ್ವರು ಸ್ಥಳದಲ್ಲೇ ಸಾವು, 8 ಮಂದಿಗೆ ಗಾಯ - four passengers died as cantor collided with bus

ನಿಂತಿದ್ದ ಬಸ್​ಗೆ ಕ್ಯಾಂಟರ್ ಗುದ್ದಿದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

accident
accident

By

Published : Aug 12, 2020, 2:43 PM IST

Updated : Aug 12, 2020, 2:57 PM IST

ಉತ್ತರ ಪ್ರದೇಶ: ಮಥುರಾ ಜಿಲ್ಲೆಯ ಯಮುನಾ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಬಿಹಾರದಿಂದ ದೆಹಲಿಗೆ ಹೋಗುವ ಬಸ್​ಗೆ ಕ್ಯಾಂಟರ್ ಡಿಕ್ಕಿ ಹೊಡೆದಿದ್ದು ನಾಲ್ವರು ಸ್ಥಳದಲ್ಲೇ ಮೃತಪಟ್ಟು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿ, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ನಿಂತಿದ್ದ ಬಸ್​ಗೆ ಗುದ್ದಿದ ಕ್ಯಾಂಟರ್

ಘಟನೆಯ ವಿವರ:

ಖಾಸಗಿ ಬಸ್​ನಲ್ಲಿ ಡೀಸೆಲ್ ಮುಗಿದ ಕಾರಣ ಬಸ್ ಚಾಲಕ ಬಸ್ ನಿಲ್ಲಿಸಿ ಡೀಸೆಲ್ ತೆಗೆದುಕೊಳ್ಳಲು ಪೆಟ್ರೋಲ್ ಬಂಕ್‌ಗೆ ಹೋಗಿದ್ದಾನೆ. ಆಗ ವೇಗವಾಗಿ ಬಂದಪ್ಪಳಿಸಿದ ಕ್ಯಾಂಟರ್ ನಿಂತಿದ್ದ ಬಸ್​ಗೆ ಹಿಂದಿನಿಂದ ಗುದ್ದಿದೆ. ಪರಿಣಾಮ, ಬಸ್​ನಲ್ಲಿದ್ದ ನಾಲ್ವರು ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ. ಬಸ್​ನಲ್ಲಿ ಒಟ್ಟು 68 ಪ್ರಯಾಣಿಕರಿದ್ದರು ಎಂಬ ಮಾಹಿತಿ ದೊರೆತಿದೆ.

Last Updated : Aug 12, 2020, 2:57 PM IST

ABOUT THE AUTHOR

...view details