ಕರ್ನಾಟಕ

karnataka

ETV Bharat / bharat

ಗುಂಡಿನ ಚಕಮಕಿ: ಗಡಿಯಲ್ಲಿ ನಾಲ್ವರು ಉಗ್ರರ ಸದೆಬಡಿದ ಭದ್ರತಾ ಪಡೆ - ಯೋಧರು-ಉಗ್ರರ ನಡುವಿನ ಗುಂಡಿನ ಕಾಳಗ

ಕಣಿವೆ ನಾಡಿನಲ್ಲಿ ನಾಲ್ವರು ಉಗ್ರರ ಸದೆ ಬಡಿಯುವಲ್ಲಿ ಭಾರತೀಯ ಯೋಧರು ಯಶಸ್ವಿಯಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ.

Four militants killed in separate gunfights
Four militants killed in separate gunfights

By

Published : Oct 10, 2020, 6:49 PM IST

ಶ್ರೀನಗರ:ಜಮ್ಮು-ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಚೀಗಾಂ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆ ನಾಲ್ವರು ಭಯೋತ್ಪಾದಕರನ್ನ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಉಗ್ರರು ಅಡಗಿ ಕುಳಿತ್ತಿದ್ದ ಪ್ರದೇಶದ ಮೇಲೆ ಭದ್ರತಾ ಪಡೆ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ನಾಲ್ವರು ಉಗ್ರರು ಹತರಾಗಿದ್ದಾರೆ. ಇದೇ ವೇಳೆ, ಒಂದು ಎಂ -4 ರೈಫಲ್​ ಹಾಗೂ ಪಿಸ್ತೂಲ್​ ವಶಪಡಿಸಿಕೊಳ್ಳಲಾಗಿದೆ.

ಮಧ್ಯಾಹ್ನ ಪುಲ್ವಾಮಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಉಗ್ರರ ಸದೆಬಡಿಯುವಲ್ಲಿ ಯೋಧರು ಯಶಸ್ವಿಯಾಗಿದ್ದು, ಅವರು ಯಾವ ಉಗ್ರ ಸಂಘಟನೆಗೆ ಸೇರಿದ್ದವರು ಎಂಬುದು ಇಲ್ಲಿಯವರೆಗೆ ತಿಳಿದು ಬಂದಿಲ್ಲ. ಅಕ್ಟೋಬರ್​ 7ರಂದು ನಡೆದ ಕಾರ್ಯಾಚರಣೆ ವೇಳೆ ಮೂವರು ಉಗ್ರರ ಸದೆಬಡಿಯುವಲ್ಲಿ ಯೋಧರು ಯಶಸ್ವಿಯಾಗಿದ್ದರು.

ABOUT THE AUTHOR

...view details