ಪ್ರಕಾಶಂ: ಇಂದು ಬೆಳಗ್ಗೆ ಕಾರೊಂದು ಹಾಲಿನ ಟ್ಯಾಂಕ್ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.
ತಿಮ್ಮಪ್ಪನ ದರ್ಶನ ಪಡೆದು ಹಿಂದಿರುಗುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತ.. ನಾಲ್ವರ ದುರ್ಮರಣ! - ನಾಲ್ವರು ಸಾವು
ಕೃಷ್ಣ ಜಿಲ್ಲೆಯ ಮೆಡೂರಿನ ಆರು ಮಂದಿ ಕಾರಿನಲ್ಲಿ ತಿರುಪತಿಗೆ ತೆರಳಿದ್ದರು. ತಿಮ್ಮಪ್ಪನ ದರ್ಶನ ಪಡೆದು ವಾಪಾಸ್ಸಾಗುತ್ತಿದ್ದ ಸಂದರ್ಭದಲ್ಲಿ ಪ್ರಕಾಶಂ ಜಿಲ್ಲೆಯ ಗುಂಡ್ಲಪಲ್ಲಿ ಗಾಮ್ರದ ಬಳಿ ಹಾಲಿನ ಟ್ಯಾಂಕ್ ಹಿಂಬದಿಗೆ ಇವರು ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.

ಈ ರಸ್ತೆ ಅಪಘಾತದಿಂದಾಗಿ ಡ್ರೈವರ್ ಸಾಂಬಾರೆಡ್ಡಿ (44), ಪಾಂಡುರಂಗರಾವು (42), ನರಸಿಂಹರಾವು (40) ಹಾಗೂ ಸತ್ಯಸಾಗರ್ (10) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಹಿಳೆಯರಾದ ಅನುರಾಧ, ಸುಪ್ರಿಯಾ ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಡ್ರೈವರ್ ಹೊರತು ಪಡಿಸಿ ಉಳಿದವರೆಲ್ಲ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.