ಕರ್ನಾಟಕ

karnataka

ETV Bharat / bharat

ನಿರ್ಮಾಣ ಹಂತದ ಕಟ್ಟಡ ಕುಸಿತ: ಅಪ್ರಾಪ್ತ ಸೇರಿ ನಾಲ್ವರ ದುರ್ಮರಣ - ಹರಿಯಾಣದ ಹಿಸಾರ್ ಜಿಲ್ಲೆ

ಹಿಸ್ಸಾರ್​​ ಜಿಲ್ಲೆಯಲ್ಲಿ ಶುಕ್ರವಾರ ನಿರ್ಮಾಣ ಹಂತದಲ್ಲಿದ್ದ ಕಾರ್ಖಾನೆಯ ಗೋಡೆ ಕುಸಿದು ನಾಲ್ವರು ಮೃತಪಟ್ಟಿದ್ದಾರೆ. ಮೃತರನ್ನು ಮಧ್ಯಪ್ರದೇಶ ಮೂಲ ನಿವಾಸಿಗಳು ಎನ್ನಲಾಗಿದೆ.

factory collapses
ಕಟ್ಟಡ ಕುಸಿತ

By

Published : Mar 21, 2020, 5:07 PM IST

ಹಿಸ್ಸಾರ್​(ಹರಿಯಾಣ)​ : ಹರಿಯಾಣದ ಹಿಸ್ಸಾರ್​ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಾರ್ಖಾನೆಯ ಗೋಡೆ ಕುಸಿದು ಅಪ್ರಾಪ್ತ ವಯಸ್ಕ ಸೇರಿದಂತೆ ನಾಲ್ವರು ಮೃತಪಟ್ಟಿರುವ ಘಟನೆ ಚಿಕನ್ವಾಸ್ ಗ್ರಾಮದ ಬಳಿ ಈ ಘಟನೆ ನಡೆದಿದೆ.

ಮೃತರನ್ನು ಕಾರ್ಮಿಕರಾದ ಹರಿ ಪ್ರಸಾದ್ (34), ಅವರ ಪತ್ನಿ ಸೋನಿಯಾ (28), ಅವರ ಮಗ ಚಿಂತು (5) ಮತ್ತು ಇನ್ನೊಬ್ಬ ಕಾರ್ಮಿಕ ಲಕ್ಷ್ಮಿ ದೇವಿ (50) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಮಧ್ಯಪ್ರದೇಶದ ಮೂಲ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಘಟನೆ ನಡೆದಾಗ ಕಾರ್ಮಿಕರು ನಿರ್ಮಾಣ ಕಾರ್ಖಾನೆಯ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಅವಶೇಷಗಳಡಿ ಸಿಲುಕಿಕೊಂಡಿದ್ದ ದೇಹಗಳನ್ನು ಜೆಸಿಬಿ ಯಂತ್ರದ ಸಹಾಯದಿಂದ ಹೊರತೆಗೆಯಲಾಯಿತು. ಬಳಿಕ ಹಿಸಾರ್‌ನ ಆಗ್ರೋಹಾ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ಕಾರ್ಖಾನೆಯ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ABOUT THE AUTHOR

...view details