ಜಬಲ್ಪುರ(ಮಧ್ಯಪ್ರದೇಶ) :ಕಾರು ಮತ್ತು ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿ ನಾಲ್ವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ರಾಷ್ಟ್ರೀಯ ಹೆದ್ದಾರಿ 30ರಲ್ಲಿ ನಡೆದಿದೆ.
ಮೃತರನ್ನು ಪಂಕಜ್ ಬರ್ಮನ್ (23), ಸುರ್ಜೀತ್ ಧುರ್ವೆ (22), ಮೋಹಿತ್ ಶರ್ಮಾ (22) ಹಾಗೂ ಅರುಣ್ ಕೋಲೆ (23) ಎಂದು ಗುರುತಿಸಲಾಗಿದೆ. ಎಲ್ಲರೂ ನಗರದ ಸಿಹೋರಾ ಪ್ರದೇಶದ ನಿವಾಸಿಗಳಾಗಿದ್ದಾರೆ.
ಕಾರಿಗೆ ಟ್ರಕ್ ಢಿಕ್ಕಿಯಾಗಿ ನಾಲ್ವರ ದುರ್ಮರಣ ಶನಿವಾರ ರಾತ್ರಿ ಮೊಹ್ಸಾಮ್ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಆರು ಜನರು ಎಸ್ಯುವಿ ಕಾರಿನಲ್ಲಿ ನಗರದತ್ತ ಹೊರಟಿದ್ದರು. ಈ ಸಿಹೋರಾ-ಬಹೇರಿಬ್ಯಾಂಡ್ ಪ್ರದೇಶದ ಬಳಿ ಈರುಳ್ಳಿ ತುಂಬಿದ ಟ್ರಕ್ ಕಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ.
ಚಾಲಕ ಅರುಣ್ ಕೋಲೆ ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡ ಇಬ್ಬರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ. ಎಸ್ಪಿ ಸಿದ್ಧಾರ್ಥ್ ಬಹುಗುಣ ಹಾಗೂ ಎಸ್‌ಎಸ್‌ಪಿ ಶಿವೇಶ್ ಸಿಂಗ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆ.
ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಟ್ರಕ್ ಗೇರ್ ಬಾಕ್ಸ್ನಲ್ಲಿ ತಾಂತ್ರಿಕ ತೊಂದರೆಯಿಂದ ಚಾಲಕ ನಿಯಂತ್ರಣ ಕಳೆದುಕೊಂಡಿದ್ದು, ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಟ್ರಕ್ ಚಾಲಕನ ವಿರುದ್ಧ ದೂರು ದಾಖಲಾಗಿದ್ದು, ವಿಚಾರಣೆ ನಡೆಸಲಾಗಿದೆ.