ಮುಂಬೈ:ಜನನಿಬಿಡ ಮಾರುಕಟ್ಟೆಯಲ್ಲಿ ಫುಟ್ಪಾತ್ ಪಕ್ಕದಲ್ಲಿನ ರೆಸ್ಟೋರೆಂಟ್ಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿಯಾದ ಪರಿಣಾಮ ನಾಲ್ಕು ಮಂದಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಮುಂಬೈನಲ್ಲಿ ನಡೆದಿದೆ.
ಫುಟ್ಪಾತ್ ಬದಿಯ ರೆಸ್ಟೋರೆಂಟ್ಗೆ ಕಾರು ಡಿಕ್ಕಿ: ನಾಲ್ವರ ದುರ್ಮರಣ - ಫುಟ್ಪಾತ್ ಕಾರು ಅಪಘಾತ
ರಸ್ತೆ ಬದಿಯ ರೆಸ್ಟೋರೆಂಟ್ಗೆ ರಭಸವಾಗಿ ಬಂದ ಕಾರು ಗುದ್ದಿದ ಪರಿಣಾಮ ನಾಲ್ವರು ಮೃತಪಟ್ಟ ಘಟನೆ ದಕ್ಷಿಣ ಮುಂಬೈನ ಮಾರುಕಟ್ಟೆಯೊಂದರಲ್ಲಿ ನಡೆದಿದೆ.
ಪ್ರಾಥಮಿಕ ವರದಿಯ ಪ್ರಕಾರ ಸೋಮವಾರ ರಾತ್ರಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಕ್ರಾಫೋರ್ಡ್ ಮಾರ್ಕೆಟ್ ಏರಿಯಾದಲ್ಲಿನ ರೆಸ್ಟೋರೆಂಟ್ಗೆ ಡಿಕ್ಕಿ ಹೊಡೆದ ಕಾರಣದಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಮೃತಪಟ್ಟವರು ರೆಸ್ಟೋರೆಂಟ್ನ ಹೊರಗಿದ್ದವರೇ? ಕಾರಿನೊಳಗಿದ್ದವರೇ.? ಎಂಬುದು ಇನ್ನೂ ತಿಳಿದು ಬಂದಿಲ್ಲ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಈ ಘಟನೆಯಲ್ಲಿ 8 ಮಂದಿ ಗಾಯಗೊಂಡಿದ್ದು, ಜೆ.ಜೆ. ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟವರನ್ನು ನಯೀಂ, ಸರೋಜ, ಜುಬೇದಾ ಹಾಗೂ ಮತ್ತೊಬ್ಬ ಅಪರಿಚಿತ ಮಹಿಳೆ ಎಂದು ಪೊಲೀಸರು ತಿಳಿಸಿದ್ದು, ತನಿಖೆ ಮುಂದುವರೆಯುತ್ತಿದೆ.