ಕರ್ನಾಟಕ

karnataka

ETV Bharat / bharat

ಬೋಯಿಂಗ್​ ವಿಮಾನ ದುರಂತದಲ್ಲಿ ನಾಲ್ವರು ಭಾರತೀಯರು ಸಾವು

ಬೋಯಿಂಗ್‌ ವಿಮಾನ ಪಥನಗೊಂಡು 157 ಜನ ಸಾವಿಗೀಡಾಗಿದ್ದು, ಈ ದುರ್ಘಟನೆಯಲ್ಲಿ ನಾಲ್ವರು ಭಾರತೀಯರೂ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

By

Published : Mar 11, 2019, 8:10 AM IST

ನಾಲ್ವರು ಭಾರತೀಯರು ಸಾವು

ಅಡೀಸ್‌ ಅಬಾಬಾ:157 ಪ್ರಯಾಣಿಕರ ಸಾವಿಗೆ ಕಾರಣವಾದ ಬೋಯಿಂಗ್​ ವಿಮಾನ ದುರಂತದಲ್ಲಿ ನಾಲ್ವರು ಭಾರತೀಯರು ಸಾವಿಗೀಡಾಗಿದ್ದಾರೆ ಎಂಬುದು ಖಚಿತವಾಗಿದ.

ಇಥಿಯೋಪಿಯಾ ರಾಜಧಾನಿ ಅಡೀಸ್‌ ಅಬಾಬಾದಿಂದ ನೈರೋಬಿಗೆ ಸಾಗುತ್ತಿದ್ದ ಬೋಯಿಂಗ್‌ ವಿಮಾನ ಪಥನಗೊಂಡು 157 ಜನ ಸಾವಿಗೀಡಾಗಿದ್ದರು.

ಇಥಿಯೋಪಿಯಾದಲ್ಲಿನ ಭಾರತೀಯ ರಾಯಭಾರಿ ಕಚೆರಿ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್​ ಅವರಿಗೆ ಈ ಕುರಿತು ಮಾಹಿತಿ ನೀಡಿದೆ. ಈ ಬಗ್ಗೆ ಟ್ವೀಟ್​ ಮಾಡಿರುವ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್,ವೈದ್ಯ ಪನ್ನಾಗೇಶ್ ಭಾಸ್ಕರ್, ವೈದ್ಯ ಹನ್ಸಿನ್ ಅನ್ನಾಗೆಶ್, ನುಕವರಪು ಮನಿಷ ಮತ್ತು ಶಿಖಾ ಗರ್ಗ್​ ಎಂಬುವವರು ಈ ದುರಂತದಲ್ಲಿ ಬಲಿಯಾಗಿದ್ದಾರೆ ಎಂದು ಟ್ವೀಟ್​​ ಮಾಡಿದ್ದಾರೆ​.

ಈ ಪೈಕಿ ಶಿಖಾ ಗರ್ಗ್ ಎಂಬುವವರು ಪರಿಸರ ಮತ್ತು ಅರಣ್ಯ ಸಚಿವಾಲಯದಲ್ಲಿ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತಿದ್ದರು. ನೈರೋಬಿಯಾದಲ್ಲಿ ನಡೆಯುತಿದ್ದ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ(UNEP)ದಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದರು ಎಂದು ಸುಶ್ಮಾ ಸ್ವರಾಜ್​ ತಿಳಿಸಿದ್ದಾರೆ.

ಅಡೀಸ್‌ ಅಬಾಬಾದಿಂದ 62 ಕಿ.ಮೀ. ದೂರದಲ್ಲಿರುವ ಬಿಶೋಫ್ತು ಎಂಬಲ್ಲಿ ವಿಮಾನ ಪತನಗೊಂಡಿದೆ. ‘ಅಡೀಸ್‌ ಅಬಾಬಾದಿಂದ ಸ್ಥಳೀಯ ಕಾಲಮಾನ 8.38ಕ್ಕೆ ಪ್ರಯಾಣ ಬೆಳೆಸಿದ್ದ ಬೋಯಿಂಗ್‌ 737 -800 ಮ್ಯಾಕ್ಸ್‌ ವಿಮಾನವು 8.44ರ ಸುಮಾರಿಗೆ ರಾಡಾರ್​ನಿಂದ ತನ್ನ ಸಂಪರ್ಕವನ್ನು ಕಳೆದುಕೊಂಡಿದೆ. ದುರ್ಘ‌ಟನಾ ಸ್ಥಳದಲ್ಲಿ ಪರಿಹಾರ ಮತ್ತು ಹುಡುಕಾಟ ಕಾರ್ಯಾಚರಣೆ ಭರದಿಂದ ಸಾಗಿದೆ' ಎಂದು ಇಥಿಯೋಪಿಯನ್‌ ಏರ್​ಲೈನ್ಸ್‌ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details