ನವದೆಹಲಿ:ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ 2012ರ ದೆಹಲಿ ಗ್ಯಾಂಗ್ ರೇಪ್ ಪ್ರಕರಣದ ಆಪರಾಧಿಗಳನ್ನು ಗಲ್ಲಿಗೇರಿಸಲಾಗಿದೆ. ಬೆಳಗ್ಗೆ 5:30ಕ್ಕೆ ತಿಹಾರ್ ಜೈಲಿನಲ್ಲಿ ನೇಣುಗಂಬಕ್ಕೆ ಏರಿಸಲಾಗಿದ್ದು, ಜೈಲಿನ ಮುಂಭಾಗ ಸಂಭ್ರಮ ಮನೆ ಮಾಡಿದೆ.
'ಭಾರತ್ ಮಾತಾ ಕೀ ಜೈ' ಘೋಷಣೆ ಮೊಳಗಿಸಿ ತಿಹಾರ್ ಜೈಲು ಮುಂಭಾಗ ಸಿಹಿ ಹಂಚಿ ಸಂಭ್ರಮ - ನಿರ್ಭಯಾ ಅತ್ಯಾಚಾರ ಪ್ರಕರಣ
ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಇಂದು ಬೆಳಗ್ಗೆ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಗಿದ್ದು, ಸಾರ್ವಜನಿಕರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ತಿಹಾರ್ ಜೈಲಿನ ಮುಂಭಾಗ ಸಿಹಿ ಹಂಚಿ ಸಂಭ್ರಮ
ಅಪರಾಧಿಗಳಾದ ಅಕ್ಷಯ್ ಸಿಂಗ್, ಪವನ್ ಗುಪ್ತಾ, ಮುಕೇಶ್ ಸಿಂಗ್ ಹಾಗೂ ವಿನಯ್ ಶರ್ಮಾ ಅವರನ್ನು ಗಲ್ಲಿಗೇರಿಸಲಾಗಿದೆ. ಹೀಗಾಗಿ ತಿಹಾರ್ ಜೈಲಿನ ಮುಂಭಾಗ ಸೇರಿದ್ದ ನೂರಾರು ಜನರು ಸಿಹಿ ವಿತರಣೆ ಮಾಡಿ ಸಂಭ್ರಮಿಸಿದ್ದಾರೆ. ಮಹಿಳಾ ಹಕ್ಕುಗಳ ಕಾರ್ಯಕರ್ತೆ ಯೋಗಿತಾ ಭಯನಾ ಸೇರಿದಂತೆ ದೆಹಲಿ ಜನತೆ ನೂರಾರು ಜನರಿಗೆ ಸಿಹಿ ಹಂಚಿದ್ದಾರೆ.