ಶಾಮ್ಲಿ: ರಾಮಾಯಣದಲ್ಲಿ ಬರುವ ಶ್ರವಣ ಕುಮಾರನ ಕಥೆ ಬಹುತೇಕ ಎಲ್ಲರಿಗೂ ಪರಿಚಿತ. ಕುರುಡರಾಗಿದ್ದ ತನ್ನ ತಂದೆ-ತಾಯಿಯ ಆಸೆ ತೀರಿಸಲು ಅವರನ್ನು ಬುಟ್ಟಿಯಲ್ಲಿ ಕೂರಿಸಿಕೊಂಡು ಹೆಗಲಲ್ಲಿ ಹೊತ್ತೊಯ್ದು ತೀರ್ಥಯಾತ್ರೆ ಮಾಡಿಸುವ ಮೂಲಕ ಆದರ್ಶ ಪುತ್ರ ಎನಿಸಿಕೊಂಡವ ಶ್ರವಣಕುಮಾರ. ಅಂತೆಯೇ ಆಧುನಿಕ ಕಾಲದಲ್ಲೂ ಶ್ರವಣಕುಮಾರನಂತೆ ಸಹೋದರು ತಮ್ಮ ತಂದೆ-ತಾಯಿಯನ್ನು ಯಾತ್ರೆಗೆ ಕರೆದೊಯ್ದಿರುವ ಅಪರೂಪದ ಘಟನೆ ಹರಿಯಾಣದಲ್ಲಿ ನಡೆದಿದೆ.
ಈ ನಾಲ್ವರು ಸಹೋದರರು ಹರಿಯಾಣದ ಪಾಣಿಪತ್ನವರಾಗಿದ್ದು, ಉತ್ತರಾಖಂಡ್ನ ಹರಿದ್ವಾರದಿಂದ ಹೊರಟಿರುವ ಇವರು, ಎರಡು ಬುಟ್ಟಿಯ ಮೂಲಕ ತಮ್ಮ ತಂದೆ-ತಾಯಿಯನ್ನು ಹೊತ್ತೊಯ್ಯುವ ಮೂಲಕ 'ಕನ್ವರ್ ಯಾತ್ರೆಯಲ್ಲಿ' ಪಾಲ್ಗೊಂಡು ಶಾಮ್ಲಿಯನ್ನು ತಲುಪಿದ್ದಾರೆ.