ಕರ್ನಾಟಕ

karnataka

ETV Bharat / bharat

ಆಂಧ್ರದ ಪ್ರಕಾಶಂನಲ್ಲಿ ರಸ್ತೆ ಅಪಘಾತ, ಬಳ್ಳಾರಿ ಮೂಲದ ನಾಲ್ವರ ಸಾವು - ರಸ್ತೆ ಅಪಘಾತದಲ್ಲಿ ಬಳ್ಳಾರಿ ಮೂಲದ ನಾಲ್ವರ ಸಾವು

ನೆರೆಯ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬಳ್ಳಾರಿ ಮೂಲದ ನಾಲ್ವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 8 ಜನರಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಸ್ತೆ ಅಪಘಾತದಲ್ಲಿ ಬಳ್ಳಾರಿ ಮೂಲದ ನಾಲ್ವರ ಸಾವು, Four Bellary persons died in road accident at Andhra Pradesh
ರಸ್ತೆ ಅಪಘಾತದಲ್ಲಿ ಬಳ್ಳಾರಿ ಮೂಲದ ನಾಲ್ವರ ಸಾವು

By

Published : Dec 12, 2019, 12:44 PM IST

ಪ್ರಕಾಶಂ (ಆಂಧ್ರ ಪ್ರದೇಶ):ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಬಳ್ಳಾರಿ ಮೂಲದ ನಾಲ್ವರು ಸಾವನ್ನಪ್ಪಿರುವ ಘಟನೆ ಪ್ರಕಾಶಂ ಜಿಲ್ಲೆಯ ಕೊತ್ತಪಲ್ಲಿಯಲ್ಲಿ ನಡೆದಿದೆ.

ಪ್ರಕಾಂಶಂನಲ್ಲಿ ಸಂಭವಿಸಿದ ಅಪಘಾತ

ಶ್ರೀಶೈಲಂಗೆ ಭೇಟಿ ನೀಡಿ ತಿರುಮಲಕ್ಕೆ ತೆರಳುವ ಹಾದಿಯಲ್ಲಿ ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಉಳಿದ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಉಳಿದಂತೆ ಇನ್ನೂ 8 ಜನ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಪೊಡಿಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಸ್ತೆ ಅಪಘಾತದಲ್ಲಿ ಬಳ್ಳಾರಿ ಮೂಲದ ನಾಲ್ವರ ಸಾವು

ಮೃತರೆಲ್ಲಾ ಬಳ್ಳಾರಿ ಮೂಲದವರೆಂದು ತಿಳಿದುಬಂದಿದೆ. ಲಾರಿ ಚಾಲಕ ನಿದ್ದೆ ಮಂಪರಿನಲ್ಲಿದ್ದ ಕಾರಣ ಅಪಘಾತ ಸಂಭವಿಸಿರಬಹುದು ಎಂದು ಹೇಳಲಾಗಿದೆ.

For All Latest Updates

ABOUT THE AUTHOR

...view details