ತಿರುವನಂತಪುರಂ:ಕೇರಳ ಸರ್ಕಾರದ ಕ್ರಿಸ್ಮಸ್-ನ್ಯೂ ಇಯರ್ ಬಂಪರ್ ಲಾಟರಿಯಲ್ಲಿ ಮಾರಾಟವಾಗದ ಲಾಟರಿ ಟಿಕೆಟ್ 46 ವರ್ಷದ ಲಾಟರಿ ಮಾರಾಟಗಾರನನ್ನು ರಾತ್ರೋರಾತ್ರಿ ಕೋಟ್ಯಧೀಶನನ್ನಾಗಿ ಮಾಡಿದೆ.
ಕೊಲ್ಲಂನಲ್ಲಿ ಲಾಟರಿ ವ್ಯಾಪಾರ ಮಾಡುತ್ತಿದ್ದ ತಮಿಳುನಾಡಿನ ತೆಂಕಸಿ ಮೂಲದ ಶರಫುದ್ದೀನ್ ಎಂಬಾತ ಮಾರಾಟವಾಗದ ಲಾಟರಿ ಟಿಕೆಟ್ ಮೂಲಕ ಪ್ರಥಮ ಬಹುಮಾನವಾಗಿ 12 ಕೋಟಿ ರೂಪಾಯಿಗಳನ್ನು ಗೆದ್ದಿದ್ದಾನೆ.
ಕೊಲ್ಲಂ ಜಿಲ್ಲೆಯ ಆರ್ಯಂಕವ್ ಬಳಿಯ ಎರಾವಿಧರ್ಮಪುರಂನಲ್ಲಿ ಒಂದು ಸಣ್ಣ ಮನೆಯಲ್ಲಿ ವಾಸಿಸುತ್ತಿರುವ ಶರಫುದ್ದೀನ್ , ಕೆಲವು ವರ್ಷಗಳ ಹಿಂದೆ ಗಲ್ಫ್ನಿಂದ ಹಿಂದಿರುಗಿದ್ದು, ತನ್ನ ಆರು ಮಂದಿಯ ಕುಟುಂಬವನ್ನು ನೋಡಿಕೊಳ್ಳಲು ಸಾಕಷ್ಟು ಕಷ್ಟ ಪಡುತ್ತಿದ್ದನು. ಕೋವಿಡ್ ಲಾಕ್ಡೌನ್ ವೇಳೆ ಶರಫುದ್ದೀನ್ ಕುಟುಂಬದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು.