ಕರ್ನಾಟಕ

karnataka

ETV Bharat / bharat

ಬಿಜೆಪಿ ನನಗಾಗಿ ಬಾಗಿಲು ತೆರೆದಿದ್ದೇ ನನ್ನ ಪುಣ್ಯ: ಸಿಂಧಿಯಾ ಭಾವನಾತ್ಮಕ ನುಡಿ

ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿ ಮಧ್ಯಪ್ರದೇಶದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಜ್ಯೋತಿರಾದಿತ್ಯ ಸಿಂಧಿಯಾ, ಬಿಜೆಪಿಗೆ ಸೇರ್ಪಡೆಯಾಗಲು ನಾನು ಪುಣ್ಯ ಮಾಡಿದ್ದೇನೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್​ ಶಾ ನನಗಾಗಿ ಬಿಜೆಪಿಯ ಬಾಗಿಲು ತೆರೆದರು ಎಂದು ಹೇಳಿದರು.

By

Published : Mar 12, 2020, 9:53 PM IST

Scindia at MP BJP office
ಮಧ್ಯಪ್ರದೇಶದ ಬಿಜೆಪಿ ಕಚೇರಿಯಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ

ಭೋಪಾಲ್​(ಮಧ್ಯಪ್ರದೇಶ): ಬಿಜೆಪಿ ನನ್ನನ್ನು ಒಪ್ಪಿಕೊಂಡಿದ್ದೇ ತನ್ನ ಅದೃಷ್ಟವೆಂದಿರುವ ಮಧ್ಯಪ್ರದೇಶದ ಮಾಜಿ ಕಾಂಗ್ರೆಸ್​ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ, ಪಕ್ಷದಲ್ಲಿದ್ದುಕೊಂಡು ಹೃದಯಪೂರ್ವಕವಾಗಿ ಕೆಲಸ ಮಾಡುತ್ತೇನೆ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದ್ದಾರೆ.

ಮಧ್ಯಪ್ರದೇಶದ ಬಿಜೆಪಿ ಕಚೇರಿಯಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಭಾವನಾತ್ಮಕ ನುಡಿ

ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿರುವ ಜ್ಯೋತಿರಾದಿತ್ಯ ಸಿಂಧಿಯಾರನ್ನು ಇಂದು ಮಧ್ಯಪ್ರದೇಶದ ಬಿಜೆಪಿ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಬರಮಾಡಿಕೊಂಡರು. ಸಿಂಧಿಯಾರನ್ನು ರಾಜ್ಯಸಭಾ ಅಭ್ಯರ್ಥಿಯಾಗಿ ಸಹ ಇಂದು ಘೋಷಿಸಲಾಯಿತು.

ಬಳಿಕ ಮಾತನಾಡಿದ ಸಿಂಧಿಯಾ, ಬಿಜೆಪಿಗೆ ಸೇರ್ಪಡೆಯಾಗಲು ನಾನು ಪುಣ್ಯ ಮಾಡಿದ್ದೇನೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್​ ಶಾ ನನಗಾಗಿ ಬಿಜೆಪಿಯ ಬಾಗಿಲು ತೆರೆದರು. ನಾನು ಇಲ್ಲಿಗೆ (ಬಿಜೆಪಿ) ನನ್ನ ಜೊತೆ ತಂದಿರುವ ಒಂದೇ ಒಂದು ವಸ್ತು ಎಂದರೆ ಅದು ನನ್ನ ಪರಿಶ್ರಮ ಎಂದು ಹೇಳಿದರು.

ನನ್ನ ಶ್ರಮವನ್ನು ಹಾಕಿ 20 ವರ್ಷಗಳನ್ನು ಕಳೆದಿರುವ ಸಂಸ್ಥೆ ಮತ್ತು ಕುಟುಂಬವನ್ನು (ಕಾಂಗ್ರೆಸ್​) ಬಿಟ್ಟು ಇಲ್ಲಿಗೆ ಬಂದಿದ್ದೇನೆ. ಈ ಕುಟುಂಬ (ಬಿಜೆಪಿ) ಬಾಗಿಲು ತೆರೆದು ನನ್ನನ್ನು ಸೇರಿಸಿಕೊಂಡಿದ್ದೇ ನನ್ನ ಪುಣ್ಯ. ಇದು ನನಗೆ ಬಹಳ ಭಾವನಾತ್ಮಕವಾದ ದಿನವಾಗಿದೆ. ರಾಜಕೀಯ ನನ್ನ ಗುರಿಯಲ್ಲ, ಸಮಾಜ ಸೇವೆಯೇ ನನ್ನ ಗುರಿ. 2018ರಲ್ಲಿ ಒಬ್ಬರ ವಿರುದ್ಧ ಒಬ್ಬರು ಹೋರಾಡಿದ್ದ ನಾವು ಈಗ ಒಂದಾಗಿದ್ದೇವೆ ಎಂದು ಶಿವರಾಜ್​ ಸಿಂಗ್​ ಚೌಹಾಣ್ ಕಡೆ ತೋರಿಸಿ ಸಿಂಧಿಯಾ ಮಾತನಾಡಿದರು.

ABOUT THE AUTHOR

...view details