ರಾಯಗಢ: ಮಹಾರಾಷ್ಟ್ರದ ರಾಯಗಢದಲ್ಲಿ ಚುನಾವಣಾ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಛತ್ರಪತಿ ಶಿವಾಜಿಯವರನ್ನ ಹಾಡಿ ಹೊಗಳಿದ್ದು, ಅವರ ಆಡಳಿತ ನಿಜಕ್ಕೂ ಭಾರತ ಹೆಮ್ಮೆ ಪಡುವಂತಹದ್ದು ಎಂದರು.
ಮಹಾರಾಷ್ಟ್ರವನ್ನ ಅದ್ಭುತ ರಾಜ್ಯವನ್ನಾಗಿ ನಿರ್ಮಾಣ ಮಾಡುವಲ್ಲಿ ಛತ್ರಪತಿ ಶಿವಾಜಿಯವರ ಕೂಡುಗೆ ಅಪಾರವಾಗಿದೆ. ಅದೇ ರೀತಿ ಭಾರತವನ್ನ ಮಹಾನ್ ರಾಷ್ಟ್ರವನ್ನಾಗಿ ಮಾಡುವಲ್ಲಿ ನವ ಮಹಾರಾಷ್ಟ್ರದ ಕೂಡುಗೆ ಅಪಾರವಾಗಿದೆ ಎಂದರು. ದೆಹಲಿಯಲ್ಲಿ ನೀವೂ ಈಗಾಗಲೇ ನರೇಂದ್ರನನ್ನ ಇನ್ನೊಮ್ಮೆ ಅಧಿಕಾರದ ಗದ್ದುಗೆ ಹಿಡಿಯುವಂತೆ ಮಾಡಿದ್ದೀರಿ. ಅದೇ ರೀತಿ ಮಹಾರಾಷ್ಟ್ರದಲ್ಲೂ ದೇವೇಂದ್ರನನ್ನು ಇನ್ನೊಮ್ಮೆ ಅಧಿಕಾರಿದ ಚುಕ್ಕಾಣಿ ಹಿಡಿದುಕೊಳ್ಳುವಂತೆ ಮಾಡಿ, ಮುಂದಿನ ದಿನಗಳಲ್ಲಿ ಮಹಾರಾಷ್ಟ್ರವನ್ನ ಅಭಿವೃದ್ದಿಯ ಹೊಸ ದೃಷ್ಠಿಕೋನದಂತೆ ತೆಗೆದುಕೊಂಡು ಹೋಗುತ್ತೇವೆ ಎಂದು ಭರವಸೆ ತುಂಬಿದರು.