ಕರ್ನಾಟಕ

karnataka

ETV Bharat / bharat

ಜಸ್ವಂತ್ ಸಿಂಗ್​​ರ ಭಾರತೀಯ ಸೇನೆ ಮತ್ತು ಕ್ಯಾಬಿನೆಟ್‌ ಪಯಣ ಹೀಗಿತ್ತು.. - ಜಸ್ವಂತ್ ಸಿಂಗ್ ಕ್ಯಾಬಿನೆಟ್‌ ಪಯಣ ಸುದ್ದಿ

2009ರಲ್ಲಿ, 'ಜಿನ್ನಾ-ಇಂಡಿಯಾ, ವಿಭಜನೆ, ಸ್ವಾತಂತ್ರ್ಯ' ಎಂಬ ಪುಸ್ತಕದಲ್ಲಿ ಹೇಳಿಕೆ ನೀಡಿದ ಹಿನ್ನೆಲೆ ಸಿಂಗ್ ಅವರನ್ನು ಬಿಜೆಪಿಯಿಂದ ಹೊರ ಹಾಕಲಾಯಿತು. ಅವರು 2010ರಲ್ಲಿ ಮತ್ತೆ ಬಿಜೆಪಿಗೆ ಸೇರಿದರು. ಆದಾಗ್ಯೂ, 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿರಾಕರಿಸಲಾಗಿದೆ ಎಂದು ವರದಿಯಾದ ನಂತರ ಅವರು ರಾಜಸ್ಥಾನದ ಬಾರ್ಮರ್ ಜಿಲ್ಲೆಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು..

BJP leader Jaswant Singh
ಜಸ್ವಂತ್ ಸಿಂಗ್

By

Published : Sep 27, 2020, 2:51 PM IST

ನವದೆಹಲಿ : ಕೇಂದ್ರದ ಮಾಜಿ ಸಚಿವ ಮತ್ತು ಹಿರಿಯ ಬಿಜೆಪಿ ಮುಖಂಡ ಜಸ್ವಂತ್ ಸಿಂಗ್ ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ.

ಮಾಜಿ ಕ್ಯಾಬಿನೆಟ್ ಸಚಿವರಾಗಿದ್ದ ಮೇಜರ್ ಜಸ್ವಂತ್ ಸಿಂಗ್ (ನಿವೃತ್ತ) ಇಂದು ಬೆಳಗ್ಗೆ 6:55ಕ್ಕೆ ದೆಹಲಿಯ ಸೇನಾ ಆಸ್ಪತ್ರೆ (ಆರ್&ಆರ್)ಯಲ್ಲಿ ನಿಧನರಾದರು. ಜೂನ್ 25 ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಲ್ಟಿ ಆರ್ಗನ್ ಡಿಸ್ಫೆಕ್ಷನ್ ಸಿಂಡ್ರೋಮ್‌ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು.

ಹಿರಿಯ ಬಿಜೆಪಿ ಮುಖಂಡ ಸಿಂಗ್ ರಾಜಕೀಯಕ್ಕೆ ಸೇರುವ ಮೊದಲು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಅವರು ಸಂಸತ್ತಿನ ಉಭಯ ಸದನಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಎನ್‌ಡಿಎ ಕ್ಯಾಬಿನೆಟ್‌ನಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು. ದಿ. ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಸಿಂಗ್ ಅವರು ಹಣಕಾಸು, ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದರು.

ಜುಲೈ 1980ರಲ್ಲಿ ಅವರು ರಾಜ್ಯಸಭೆಗೆ ಆಯ್ಕೆಯಾದರು. ಮತ್ತು ಜುಲೈ 1986ರಲ್ಲಿ ಮತ್ತೆ ಮೇಲ್ಮನೆಗೆ ಆಯ್ಕೆಯಾದರು. 1996-97ರವರೆಗೆ ಅವರು 11ನೇ ಲೋಕಸಭೆಯ ಸದಸ್ಯರಾಗಿದ್ದರು ಮತ್ತು ಮೇ 1996ರಲ್ಲಿ ಅವರು ಕೇಂದ್ರ ಹಣಕಾಸು ಸಚಿವರಾದರು. ಮಾರ್ಚ್ 25, 1998 ರಿಂದ ಫೆಬ್ರವರಿ 4, 1999ರವರೆಗೆ ಅವರು ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದರು.

ಜುಲೈ 1998ರಲ್ಲಿ ಸಿಂಗ್ ರಾಜ್ಯಸಭೆಗೆ ಆಯ್ಕೆಯಾದರು. ಡಿಸೆಂಬರ್ 1998ರಲ್ಲಿ ಜುಲೈ 1, 2002ರಂದು ಅವರು ವಿದೇಶಾಂಗ ಸಚಿವರಾಗಿದ್ದರು. ಫೆಬ್ರವರಿ-ಅಕ್ಟೋಬರ್ 1999ರಿಂದ, ಅವರು ಏಕಕಾಲದಲ್ಲಿ ಎಲೆಕ್ಟ್ರಾನಿಕ್ಸ್ ಸಚಿವರ ಜವಾಬ್ದಾರಿ ಹೊಂದಿದ್ದರು. ಆಗಸ್ಟ್ 6ರಿಂದ ಅಕ್ಟೋಬರ್ 13, 1999ರವರೆಗೆ ಅವರು ಸಾರಿಗೆ ಸಚಿವರಾಗಿದ್ದರು. ಅಕ್ಟೋಬರ್ 15, 1999 ರಿಂದ ಮೇ 21, 2004 ರವರೆಗೆ ಅವರು ರಾಜ್ಯಸಭೆಯ ಸದನದ ನಾಯಕರಾಗಿದ್ದರು.

ಮಾರ್ಚ್ 18 ರಿಂದ ಅಕ್ಟೋಬರ್ 15, 2001ರವರೆಗೆ ಅವರು ರಕ್ಷಣಾ ಸಚಿವರಾಗಿದ್ದರು. ಜುಲೈ 1, 2002 ರಿಂದ ಏಪ್ರಿಲ್ 9, 2003 ರವರೆಗೆ ಅವರು ಹಣಕಾಸು ಮತ್ತು ಕಂಪನಿ ವ್ಯವಹಾರಗಳ ಸಚಿವರಾಗಿದ್ದರು. ಏಪ್ರಿಲ್ 10, 2003 ರಿಂದ ಮೇ 21, 2004 ರವರೆಗೆ ಅವರು ಹಣಕಾಸು ಸಚಿವರಾಗಿದ್ದರು. ಜೂನ್ 3 ರಿಂದ ಜುಲೈ 4, 2004 ರವರೆಗೆ ಅವರು ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿದ್ದರು ಮತ್ತು ಜುಲೈ 5, 2004 ರಿಂದ, ಜುಲೈ 2004ರಲ್ಲಿ ಅವರು ಮತ್ತೆ ರಾಜ್ಯಸಭೆಗೆ ಆಯ್ಕೆಯಾದರು.

ಡಿಸೆಂಬರ್ 1999ರಲ್ಲಿ ನಡೆದ ಇಂಡಿಯನ್ ಏರ್ಲೈನ್ಸ್​​ನ ಐಸಿ -814 ಫ್ಲೈಟ್ ಹೈಜಾಕಿಂಗ್ ಘಟನೆಯಲ್ಲಿ ಅವರು ಒಮರ್ ಸಯೀದ್ ಶೇಖ್, ಮುಷ್ತಾಕ್ ಅಹ್ಮದ್ ಜರ್ಗರ್ ಮತ್ತು ಅಜರ್ ಮಸೂದ್ ಎಂಬ ಮೂವರು ಭಯೋತ್ಪಾದಕರನ್ನು ಬೆಂಗಾವಲಿನಲ್ಲಿ ಕಂದಹಾರ್ಗೆ ಕರೆದೊಯ್ದಿದ್ದರು ಎಂದು ವರದಿಯಾಗಿದೆ.

2009ರಲ್ಲಿ, 'ಜಿನ್ನಾ-ಇಂಡಿಯಾ, ವಿಭಜನೆ, ಸ್ವಾತಂತ್ರ್ಯ' ಎಂಬ ಪುಸ್ತಕದಲ್ಲಿ ಹೇಳಿಕೆ ನೀಡಿದ ಹಿನ್ನೆಲೆ ಸಿಂಗ್ ಅವರನ್ನು ಬಿಜೆಪಿಯಿಂದ ಹೊರ ಹಾಕಲಾಯಿತು. ಅವರು 2010ರಲ್ಲಿ ಮತ್ತೆ ಬಿಜೆಪಿಗೆ ಸೇರಿದರು. ಆದಾಗ್ಯೂ, 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿರಾಕರಿಸಲಾಗಿದೆ ಎಂದು ವರದಿಯಾದ ನಂತರ ಅವರು ರಾಜಸ್ಥಾನದ ಬಾರ್ಮರ್ ಜಿಲ್ಲೆಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು.

ಅವರು ಬಿಜೆಪಿಯ ಕರ್ನಲ್ ಸೋನಾ ರಾಮ್ ಅವರ ವಿರುದ್ಧ ಚುನಾವಣೆಯಲ್ಲಿ ಸೋತರು. ಸಿಂಗ್​ ಜನವರಿ 3, 1938ರಂದು ರಾಜಸ್ಥಾನದ ಜಾಸೋಲ್ ಗ್ರಾಮದಲ್ಲಿ ಜನಿಸಿದರು. 2014ರಲ್ಲಿ ಸಿಂಗ್ ಅವರ ನಿವಾಸದಲ್ಲಿ ಬಿದ್ದು ತಲೆಗೆ ಪೆಟ್ಟಾಗಿ ರಾಷ್ಟ್ರ ರಾಜಧಾನಿಯ ಆರ್ಮಿ (ಆರ್ & ಆರ್) ಆಸ್ಪತ್ರೆಗೆ ದಾಖಲಿಸಲಾಗಿತ್ತು.

ABOUT THE AUTHOR

...view details