ಕರ್ನಾಟಕ

karnataka

ETV Bharat / bharat

ಇಂಧನ ಮತ್ತು ಸಂಪನ್ಮೂಲ ಸಂಸ್ಥೆ ಮಾಜಿ ಮುಖ್ಯಸ್ಥ ಆರ್‌.ಕೆ.ಪಚೌರಿ ನಿಧನ - ದೀರ್ಘಕಾಲದ ಹೃದಯ ಕಾಯಿಲೆ

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಇಂಧನ ಮತ್ತು ಸಂಪನ್ಮೂಲ ಸಂಸ್ಥೆ (ಟೆರಿ) ಮಾಜಿ ಮುಖ್ಯಸ್ಥ ಆರ್‌.ಕೆ.ಪಚೌರಿ ​(79) ಅವರು ಗುರುವಾರ ನಿಧನರಾದರು.

Former TERI chief R K Pachauri passes away at 79
ಇಂಧನ ಮತ್ತು ಸಂಪನ್ಮೂಲ ಸಂಸ್ಥೆ ಮಾಜಿ ಮುಖ್ಯಸ್ಥ ಆರ್‌.ಕೆ.ಪಚೌರಿ ನಿಧನ

By

Published : Feb 13, 2020, 11:30 PM IST

ನವದೆಹಲಿ:ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಇಂಧನ ಮತ್ತು ಸಂಪನ್ಮೂಲ ಸಂಸ್ಥೆ (ಟೆರಿ, TERI) ಮಾಜಿ ಮುಖ್ಯಸ್ಥ ಆರ್‌.ಕೆ.ಪಚೌರಿ ​(79) ಅವರು ಗುರುವಾರ ನಿಧನರಾದರು.

ದೀರ್ಘಕಾಲದ ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಪಚೌರಿ ಅವರನ್ನು ದೆಹಲಿಯ ಎಸ್ಕಾರ್ಟ್ಸ್ ಹಾರ್ಟ್ ಇನ್ಸ್​​ಟಿಟ್ಯೂಟ್​ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಟೆರಿ ಅಧ್ಯಕ್ಷ ನಿತಿನ್ ದೇಸಾಯಿ ಅವರು, ಜಾಗತಿಕ ಸುಸ್ಥಿರ ಅಭಿವೃದ್ಧಿಗೆ ಪಚೌರಿ ಅವರ ಕೊಡುಗೆ ಅಪಾರ ಎಂದು ಶ್ಲಾಘಿಸಿದ್ದಾರೆ.

2015ರಲ್ಲಿ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಕೇಳಿಬಂದ ಹಿನ್ನೆಲೆಯಲ್ಲಿ ಪಚೌರಿ ಅವರು ತಮ್ಮ ಸ್ಥಾನ ತ್ಯಜಿಸಿದ್ದರು.

ABOUT THE AUTHOR

...view details