ಕರ್ನಾಟಕ

karnataka

ETV Bharat / bharat

ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಮುದುಕ: ಸ್ಥಳೀಯರಿಂದ ಥಳಿತ - attempts to sexually assault minor

ಇಲ್ಲಿನ ಖಮ್ಮಂ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ 63 ವರ್ಷದ ಮಾಜಿ ಗ್ರಾಮ ಪಂಚಾಯಿತಿ​ ಸದಸ್ಯ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.

ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಮುದುಕFormer Sarpanch attempts to sexually assault minor, beaten up by locals,
ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಮುದುಕ

By

Published : Jan 23, 2020, 2:32 PM IST

ಹೈದರಾಬಾದ್​ : ಇಲ್ಲಿನ ಖಮ್ಮಂ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ 63 ವರ್ಷದ ಮಾಜಿ ಗ್ರಾಮ ಪಂಚಾಯಿತಿ​ ಸದಸ್ಯ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.

ಸ್ಥಳೀಯ ನಿವಾಸಿಗಳು ಆತನನ್ನು ಹಿಡಿದು ಥಳಿಸಿದ್ದಾರೆ. ಗಾಯಗೊಂಡ ಹಿನ್ನೆಲೆ ಆರೋಪಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮುಡಿಗೊಂಡ ಮಂಡಲ್​ನಲ್ಲಿಈತ ಒಬ್ಬನೇ ವಾಸವಿದ್ದು, ನಿನ್ನೆ ರಾತ್ರಿ 13 ವರ್ಷದ ಬಾಲಕಿಗೆ ಅಂಗಡಿಯಿಂದ ತಿಂಡಿ ತರಲು ಹೇಳಿದ್ದಾನೆ. ಅಂತೆಯೇ ಬಾಲಕಿ ತಿಂಡಿ ತೆಗೆದುಕೊಂಡು ಆತನ ಮನೆಗೆ ಹೋದಾಗ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಾಲಕಿಯ ಪೋಷಕರು ಸಮಾರಂಭಕ್ಕೆ ಹೋಗಿ ಬಂದಾಗ ಆಕೆ ಮನೆಯಲ್ಲಿಲ್ಲದ್ದನ್ನು ನೋಡಿ ಹೆದರಿದ್ದಾರೆ. ಅಷ್ಟರಲ್ಲಾಗಲೇ ಆರೋಪಿಯ ಮನೆಯಿಂದ ಅಳುವ ಶಬ್ದ ಕೇಳಿ ಅಲ್ಲಿಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಇದರಿಂದ ರೊಚ್ಚಿಗೆದ್ದ ಪೋಷಕರು ಹಾಗೂ ಸ್ಥಳೀಯರು ಆತನನ್ನು ಹಿಗ್ಗಾ ಮುಗ್ಗ ಥಳಿಸಿದ್ದಾರೆ.

ಆರೋಪಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವನ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಸಂಬಂಧ ಅತ್ಯಾಚಾರ ಮತ್ತು ಪೊಕ್ಸೋ ಪ್ರಕರಣವನ್ನು ದಾಖಲು ಮಾಡಿರುವ ಪೊಲೀಸರು ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ.

ABOUT THE AUTHOR

...view details