ಕರ್ನಾಟಕ

karnataka

ETV Bharat / bharat

ರಣಜಿ ಕ್ರಿಕೆಟ್​ನ ಮಾಜಿ ಆಟಗಾರ ಆತ್ಮಹತ್ಯೆ: ಕೊಲೆ ಕೇಸ್​ ದಾಖಲಿಸಿಕೊಳ್ಳುವಂತೆ ಕುಟುಂಬದವರ ಪಟ್ಟು - ನರೇಂದ್ರ ಸಿಂಗ್​

ರಣಜಿ ಕ್ರಿಕೆಟ್​ನ ಮಾಜಿ ಆಟಗಾರ ಹಾಗೂ ಕ್ರಿಕೆಟ್​ ತರಬೇತುದಾರ ನರೇಂದ್ರ ಸಿಂಗ್ ಜೋಧಪುರದ ತಮ್ಮ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ​

Narendra Singh
ನರೇಂದ್ರ ಸಿಂಗ್

By

Published : Jun 24, 2020, 1:30 PM IST

ಜೋಧಪುರ (ರಾಜಸ್ಥಾನ): ರಣಜಿ ಕ್ರಿಕೆಟ್​ನ ಮಾಜಿ ಆಟಗಾರ ಹಾಗೂ ಕ್ರಿಕೆಟ್​ ಕೋಚ್​ ನರೇಂದ್ರ ಸಿಂಗ್​ ಜೋಧಪುರದ ಹಳೇ ಕ್ಯಾಂಪಸ್​ನಲ್ಲಿರುವ ತಮ್ಮ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳಕ್ಕೆ ಉದಯಮಂದಿರ ಪೊಲೀಸ್​ ಠಾಣೆಯ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮಥುರಾದಾಸ್​ ಮಾಥುರ್​ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ನರೇಂದ್ರ ಸಿಂಗ್ ಕುಟುಂಬದವರು ಈ ಪ್ರಕರಣವನ್ನು ಕೊಲೆ ಪ್ರಕರಣವನ್ನಾಗಿ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಳ್ಳಬೇಕು. ಅಲ್ಲಿಯವರೆಗೂ ಮೃತದೇಹವನ್ನು ಕೊಂಡೊಯ್ಯವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ರಣಜಿ ಕ್ರಿಕೆಟ್​​ನ ಮಾಜಿ ಆಟಗಾರ ನರೇಂದ್ರ ಸಿಂಗ್

ಈ ವೇಳೆ, ನರೇಂದ್ರಸಿಂಗ್​ ತಾಯಿ ಮಾತನಾಡಿ ನನ್ನ ಮಗ ಒಂದು ತಿಂಗಳಿನಿಂದ ಮಾನಸಿಕ ಒತ್ತಡದಿಂದ ಬಳಲುತ್ತಿದ್ದು, ಕೆಲವು ದಿನಗಳ ಹಿಂದೆ ಮನೆಗೆ ಬಂದು ಯಾರೊಂದಿಗೂ ಮಾತನಾಡದೇ ಊಟ ಮಾಡಿ ತೆರಳಿದ್ದ. ಕೆಲವರು ನನ್ನ ಮಗನಿಗೆ ಬೆದರಿಕೆ ಹಾಕಿದ ಕಾರಣದಿಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನನ್ನ ಮಗನ ಸಾವಿಗೆ ನ್ಯಾಯ ಒದಗಿಸಿ ಎಂದು ಅಳಲು ತೋಡಿಕೊಂಡಿದ್ದಾರೆ. ನರೇಂದ್ರ ಸಿಂಗ್​​​ ಮೊಬೈಲ್​ನಲ್ಲಿರುವ ಮೆಮೋರಿ ಕೂಡಾ ಫಾರ್ಮೆಟ್​ ಆಗಿರುವುದು ಕಂಡುಬಂದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details