ಕರ್ನಾಟಕ

karnataka

By

Published : Sep 20, 2020, 1:38 PM IST

Updated : Sep 20, 2020, 2:09 PM IST

ETV Bharat / bharat

'ಕೊರೊನಾ ವೇಳೆ ಕೇಂದ್ರ ಸರ್ಕಾರದಿಂದ ಕೃಷಿ ಮಸೂದೆಗೆ ಅವಸರವೇಕೆ?'

ಕೊರೊನಾದಿಂದ ರಾಷ್ಟ್ರದ ಮೇಲೆ ದುಷ್ಪರಿಣಾಮ ಉಂಟಾಗಿದ್ದು, ಈ ವೇಳೆ ಕೇಂದ್ರ ಸರ್ಕಾರ ಕೃಷಿ ಮಸೂದೆಗಳನ್ನು ಅವಸರದಲ್ಲಿ ಮಂಡಿಸಲು ಕಾರಣವೇನು ಎಂದು ರಾಜ್ಯಸಭಾ ಸದಸ್ಯ ದೇವೇಗೌಡ ಪ್ರಶ್ನಿಸಿದ್ದಾರೆ.

MP HD Devegowda
ರಾಜ್ಯಸಭಾ ಸದಸ್ಯ ದೇವೇಗೌಡ

ನವದೆಹಲಿ:ಕೊರೊನಾ ಸೋಂಕಿನ ನಡುವೆ ಕೃಷಿಗೆ ಸಂಬಂಧಿಸಿದ ಮಸೂದೆಗಳನ್ನು ಮಂಡಿಸಲು ಆತುರವೇನಿದೆ ಎಂಬುದನ್ನು ಪ್ರಧಾನಿ ವಿವರಿಸಬೇಕು ಎಂದು ಮಾಜಿ ಪ್ರಧಾನಿ ಹಾಗೂ ಹಾಲಿ ರಾಜ್ಯಸಭಾ ಸದಸ್ಯ ಹೆಚ್.​ಡಿ.ದೇವೇಗೌಡ ಆಗ್ರಹಿಸಿದ್ದಾರೆ.

ರಾಜ್ಯಸಭಾ ಸದಸ್ಯ ಹೆಚ್​.ಡಿ. ದೇವೇಗೌಡರು

ರಾಜ್ಯಸಭೆಯಲ್ಲಿ ಕೃಷಿ ಸಂಬಂಧಿ ಮಸೂದೆಗಳನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಂಡಿಸಿದ ನಂತರ ಮಾತನಾಡಿದ ದೇವೇಗೌಡರು, ಕೃಷಿ ಮಸೂದೆಗಳು ಅಲ್ಪಾವಧಿ ಹಾಗೂ ದೀರ್ಘಾವಧಿಯಲ್ಲಿ ಯಾವ ರೀತಿಯಲ್ಲಿ ಸಹಕರಿಸುತ್ತವೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.

ಇದರ ಜೊತೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದ್ದು, ಇದು ಹೇಗೆ ಸಾಧ್ಯ ಎಂಬುದನ್ನು ಸರ್ಕಾರ ವಿವರಿಸಬೇಕು ಎಂದರು.

Last Updated : Sep 20, 2020, 2:09 PM IST

ABOUT THE AUTHOR

...view details