ನಾಗ್ಪುರ (ಮಹಾರಾಷ್ಟ್ರ):ನಾಗ್ಪುರದ 72 ವರ್ಷದ ಮಾಜಿ ಕಾರ್ಪೊರೇಟರ್, ಇದೀಗ ನಗರದ ಒಂದು ಸಂಸ್ಥೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದೇ ಸಂಸ್ಥೆಯಲ್ಲಿ ಅವರು ಹಿಂದೆ ಟ್ರಸ್ಟಿಯಾಗಿದ್ದರು. ಒಂದು ಕಾಲದಲ್ಲಿ ನಾಗರಿಕ ಸಂಸ್ಥೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಕಾರ್ಯಕರ್ತ ದೇವರಾವ್ ಟಿಜಾರೆ ಅವರು, ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ.
ಸೆಕ್ಯುರಿಟಿ ಗಾರ್ಡ್ ಆದ ನಾಗ್ಪುರದ ಮಾಜಿ ಕಾರ್ಪೊರೇಟರ್ - ನಾಗ್ಪುರದ ಮಾಜಿ ಕಾರ್ಪೋರೇಟರ್
ಕುಟುಂಬ ನಿರ್ವಹಣೆಯ ಸಲುವಾಗಿ ಮಾಜಿ ಕಾರ್ಪೊರೇಟರ್ ಒಬ್ಬರು, ಇದೀಗ ನಾಗ್ಪುರದ ಒಂದು ಸಂಸ್ಥೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇವರು ಮೊದಲು 1985 ರಲ್ಲಿ ನಗರದ ಶಾಂತಿ ನಗರ ವಾರ್ಡ್‌ನಿಂದ ಕಾರ್ಪೊರೇಟರ್ ಆಗಿದ್ದರು. 1991 ರಲ್ಲಿ ಅವರು ನಾಗ್ಪುರ ಮುನ್ಸಿಪಲ್ ಕಾರ್ಪೊರೇಶನ್‌ನ (ಎನ್‌ಎಂಸಿ) ಸ್ಥಾಯಿ ಸಮಿತಿಯ ಅಧ್ಯಕ್ಷರಾದರು ಮತ್ತು ನಾಗಪುರ ಸುಧಾರಣಾ ಟ್ರಸ್ಟ್‌ನ (ಎನ್‌ಐಟಿ) ಟ್ರಸ್ಟಿಯಾಗಿದ್ದರು. ಎನ್‌ಸಿಪಿ ಅಭ್ಯರ್ಥಿಯಾಗಿ ಅದೇ ವಾರ್ಡ್‌ನಿಂದ 2002 ರಲ್ಲಿ ಎರಡನೇ ಬಾರಿಗೆ ಕಾರ್ಪೊರೇಟರ್ ಆಗಿ ಆಯ್ಕೆಯಾಗಿದ್ದರು.
ಈ ಕುರಿತು ಅವರು ಮಾತನಾಡಿ, ಹಣಕಾಸಿನ ತೊಂದರೆಯಿಂದಾಗಿ ಈ ಕೆಲಸವನ್ನು ನಾನು ಮಾಡಬೇಕಾಗಿದೆ. ನನ್ನ ಕುಟುಂಬವನ್ನು ಬೆಂಬಲಿಸಬೇಕು. ನಾನು 4 ರಿಂದ 5 ವರ್ಷಗಳಿಂದ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದೇನೆ. ನಾನು ತಿಂಗಳಿಗೆ ಸುಮಾರು 7,000 ರೂ ಸಂಪಾದಿಸುವುದಾಗಿ ತಿಳಿಸಿದ್ದಾರೆ.