ಕರ್ನಾಟಕ

karnataka

ETV Bharat / bharat

ಇಸ್ರೋ ಮಾಜಿ ಅಧ್ಯಕ್ಷರಿಗೆ ಜೀವಬೆದರಿಕೆ : ಕೇರಳ ಪೊಲೀಸರಿಂದ ತನಿಖೆ - ಜೀವ ಬೆದರಿಕೆ

ಇಸ್ರೋ ಮಾಜಿ ಅಧ್ಯಕ್ಷ ಜಿ . ಮಾಧವನ್ ನಾಯರ್​ರಿಗೆ ಜೀವ ಬೆದರಿಕೆ ಪತ್ರ ಬಂದಿದೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.

ಇಸ್ರೋ ಮಾಜಿ ಅಧ್ಯಕ್ಷ ಜಿ . ಮಾಧವನ್ ನಾಯರ್​ರಿಗೆ ಜೀವ ಬೆದರಿಕೆ

By

Published : Mar 30, 2019, 10:21 AM IST

ತಿರುವನಂತಪುರಂ :ಇಸ್ರೋ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಸದಸ್ಯ ಜಿ . ಮಾಧವನ್ ನಾಯರ್​ ಅವರಿಗೆ ಜೀವ ಬೆದರಿಕೆ ಪತ್ರ ಬಂದಿದೆ. ಈ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸಲು ಕೇರಳ ಪೊಲೀಸರು ಮುಂದಾಗಿದ್ದಾರೆ.

ಕಳೆದ ಬುಧವಾರ ಅವರಿಗೆ ಅನಾಮಿಕನೊಬ್ಬ, ಜೀವ ಬೆದರಿಕೆಯೊಡ್ಡಿ ಪತ್ರ ಬರೆದಿದ್ದ. ಆದರೆ, ನಾಯರ್ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ತಿಳಿದುಬಂದಿದೆ.

ಈ ಬಗ್ಗೆ ತನಗೆ ಮುಂಚೆಯೇ ಗುಪ್ತಚರದಿಂದ ಮಾಹಿತಿ ಇದೆ. ಆದ ಕಾರಣ ಬೆದರಿಕೆ ಪತ್ರವನ್ನು ಕಡೆಗಣಿಸಿದೆ ಎಂದು ನಾಯರ್​ ಹೇಳಿಕೊಂಡಿದ್ದಾರೆ.ಆದರೆ, ಕೇರಳ ಪೊಲೀಸರು ಭಾರತೀಯ ದಂಡ ಸಂಹಿತೆಯಡಿ ಸಂಬಂಧಪಟ್ಟ ಪ್ರಕರಣಗಳನ್ನು ದಾಖಲಿಸಿಕೊಂಡು, ಉನ್ನತ ಮಟ್ಟದ ತನಿಖೆ ಕೈಗೊಂಡಿದ್ದಾರೆ.

ಮಾಧವನ್​ ನಾಯರ್​ ಅವರು ಭಾರತೀಯ ಬಾಹ್ಯಾಕಾಶ ಸಂಶೊಧನಾ ಸಂಸ್ಥೆ (ಇಸ್ರೋ)ದಲ್ಲಿ ಸೇವೆ ಸಲ್ಲಿಸಿ, 2009ರಲ್ಲಿ ನಿವೃತ್ತರಾಗಿದ್ದರು. ಕಳೆದ ವರ್ಷ ಅಕ್ಟೋಬರ್​ ತಿಂಗಳಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.

ABOUT THE AUTHOR

...view details