ಕರ್ನಾಟಕ

karnataka

ETV Bharat / bharat

ಭಾರತದ ಮಾಜಿ ಫುಟ್​ಬಾಲ್​ ಆಟಗಾರ ಸತ್ಯಜಿತ್ ಘೋಷ್ ವಿಧಿವಶ - ಮೊಹುನ್ ಬಗನ್ ಅಥ್ಲೆಟಿಕ್ ಸಂಸ್ಥೆ

ಭಾರತದ ಮಾಜಿ ಫುಟ್​ಬಾಲ್ ಆಟಗಾರ ಸತ್ಯಜಿತ್ ಘೋಷ್ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Satyajit Ghosh
ಸತ್ಯಜಿತ್ ಘೋಷ್

By

Published : Nov 9, 2020, 9:23 PM IST

ಕೋಲ್ಕತ್ತಾ :ಭಾರತದ ಮಾಜಿ ಫುಟ್​ಬಾಲ್ ಆಟಗಾರ ಸತ್ಯಜಿತ್ ಘೋಷ್ ಸೋಮವಾರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

62 ವರ್ಷದ ಸತ್ಯಜಿತ್ ಘೋಷ್​ಗೆ ಬಂದೇಲ್ ನಗರದಲ್ಲಿರುವ ದೇಬಾನಂದಪುರದ ತಮ್ಮ ನಿವಾಸದಲ್ಲಿ ಹೃದಯಾಘಾತವಾಗಿದ್ದು, ಚಿನ್ಸುರಾ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಮೊಹುನ್ ಬಗನ್ ಅಥ್ಲೆಟಿಕ್ ಸಂಸ್ಥೆಯ ಪರವಾಗಿ 1982ರಿಂದ 1986ರವರೆಗೆ ಹಾಗೂ 1988ರಲ್ಲಿ ಆಡಿದ್ದರು. ನೆಹರೂ ಕಪ್ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು ಎಂದು ಮೊಹುನ್ ಬಗನ್ ಸಂಸ್ಥೆ ಟ್ವೀಟ್ ಮಾಡಿದ್ದು, ಸಂತಾಪ ವ್ಯಕ್ತಪಡಿಸಿದೆ.

1980ರಲ್ಲಿ ರೈಲ್ವೆ ಫುಟ್​ಬಾಲ್ ಕ್ಲಬ್ ಪರವಾಗಿ ಆಡಿ ತಮ್ಮ ವೃತ್ತಿ ಜೀವನ ಆರಂಭಿಸಿದ ಸತ್ಯಜಿತ್ ಘೋಷ್ ಭಾರತದ ಇನ್ನೋರ್ವ ಫುಟ್ಬಾಲ್ ಆಟಗಾರರಾದ ಸುಬ್ರತೋ ಭಟ್ಟಾಚಾರ್ಯ ಅವರೊಂದಿಗೆ ಗುರುತಿಸಿಕೊಂಡಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಬ್ರತೋ ಭಟ್ಟಾಚಾರ್ಯ '' ನಾನು ತುಂಬಾ ಮಂದಿಯೊಂದಿಗೆ ಆಡಿದ್ದೇನೆ. ಅವರಲ್ಲಿ ಸತ್ಯಜಿತ್ ಘೋಷ್ ಅತ್ಯುತ್ತಮವಾಗಿದ್ದಾರೆ. ಎಲ್ಲಾ ಸಮಸ್ಯೆಗಳನ್ನು ಸುಲಲಿತವಾಗಿ ಬಗೆಹರಿಸುತ್ತಿದ್ದರು'' ಎಂದು ಭಾವುಕರಾಗಿದ್ದಾರೆ.

ಸತ್ಯಜಿತ್ ಘೋಷ್​ಗೆ ಮೊಹುನ್ ಬಗನ್​​ನಲ್ಲಿ 1986ರಲ್ಲಿ ಆಡುವಾಗ ಗಾಯವಾಗಿದ್ದು, ಮತ್ತೆ 1989ರಲ್ಲಿ ಮೊಹುನ್ ಬಗನ್ ಪರ ಆಡಿದ್ದರು.

ABOUT THE AUTHOR

...view details