ಕರ್ನಾಟಕ

karnataka

ETV Bharat / bharat

ಜೇಟ್ಲಿ ಆರೋಗ್ಯ ಮತ್ತಷ್ಟು ಕ್ಷೀಣ... ಕೆಲವೇ ಕ್ಷಣಗಳಲ್ಲಿ ಏಮ್ಸ್ ಆಸ್ಪತ್ರೆಗೆ ರಾಷ್ಟ್ರಪತಿ ಆಗಮನ

66 ವರ್ಷದ ಅರುಣ್ ಜೇಟ್ಲಿ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ವಿತ್ತ ಸಚಿವರಾಗಿ ಕಾಯರ್ನಿರ್ವಹಿಸಿದ್ದರು. ಆರೋಗ್ಯ ಸಮಸ್ಯೆಯಿಂದ ಜೇಟ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಿಂದ ದೂರ ಉಳಿದಿದ್ದರು. ಅನಾರೋಗ್ಯಕ್ಕೆ ತುತ್ತಾಗಿರುವ ಅವರು ಸದ್ಯ ಏಮ್ಸ್​ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜೇಟ್ಲಿ

By

Published : Aug 16, 2019, 10:41 AM IST

ನವದೆಹಲಿ:ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಆರೋಗ್ಯ ಮತ್ತಷ್ಟು ಕ್ಷೀಣಿಸಿದ್ದು, ದೆಹಲಿಯ ಏಮ್ಸ್ ಆಸ್ಪತ್ರೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹನ್ನೊಂದು ಗಂಟೆಗೆ ಆಗಮಿಸುವ ಸಾಧ್ಯತೆ ಇದೆ.

ಉಸಿರಾಟದ ತೊಂದರೆಯಿಂದ ಅರುಣ್​ ಜೇಟ್ಲಿ ಅವರನ್ನ ಆಗಸ್ಟ್ 9ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ವೆಂಟಿಲೇಟರ್​ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಹಿರಿಯ ನಾಯಕನ ಆರೋಗ್ಯ ಸ್ಥಿತಿ ಉಲ್ಬಣಿಸಿದೆ ಎಂದು ಮೂಲಗಳು ತಿಳಿಸಿವೆ.

ಏಮ್ಸ್ ಆಸ್ಪತ್ರೆಗೆ ದಾಖಲಾದ ಮಾಜಿ ವಿತ್ತ ಸಚಿವ ಅರುಣ್​ ಜೇಟ್ಲಿ... ಹಾಸ್ಪಿಟಲ್​​ಗೆ ದೌಡಾಯಿಸಿದ ಅಮಿತ್​ ಶಾ!

66 ವರ್ಷದ ಅರುಣ್ ಜೇಟ್ಲಿ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ವಿತ್ತ ಸಚಿವರಾಗಿ ಕಾಯರ್ನಿರ್ವಹಿಸಿದ್ದರು. ಮೋದಿ ಅವರು ಪ್ರಧಾನಿ ಅಭ್ಯರ್ಥಿ ಆಗಲು ಪ್ರಮುಖ ಪಾತ್ರ ವಹಿಸಿದ್ದ ಅರುಣ್​ ಜೇಟ್ಲಿ, ಎನ್​ಡಿಎ ಸರ್ಕಾರ ಟ್ರಬಲ್​ ಶೂಟರ್​ ಆಗಿದ್ದರು.. ರಫೆಲ್​ ಸೇರಿದಂತೆ ಗಂಭೀರ ಆರೋಪಗಳ ಸಂದರ್ಭದಲ್ಲಿ ಮೋದಿ ಪರವಾಗಿ ಸಾಕ್ಷ್ಯ ಸಮೇತ, ದಾಖಲೆಗಳನ್ನಿಷ್ಟುಕೊಂಡು ತಿರುಗೇಟು ನೀಡುತ್ತಿದ್ದರು. ನೋಟ್​ ಬ್ಯಾನ್​ ಸೇರಿದಂತೆ ಕ್ರಾಂತಿಕಾರಿ ನಿರ್ಧಾರ ಕೈಗೊಳ್ಳುವ ಮಾಸ್ಟರ್​ ಮೈಂಡ್​ ಜೇಟ್ಲಿ ಆಗಿದ್ದರು. ಆದರೆ, ಆರೋಗ್ಯ ಸಮಸ್ಯೆಯಿಂದ ಜೇಟ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಿಂದ ದೂರ ಉಳಿದಿದ್ದರು.

ಇದೇ ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್​ ಸಹ ಜೇಟ್ಲಿ ಮಂಡನೆ ಮಾಡಿರಲಿಲ್ಲ. ಚಿಕಿತ್ಸೆ ಹಿನ್ನಲೆಯಲ್ಲಿ ಜೇಟ್ಲಿ ಅಮೆರಿಕಾದಲ್ಲಿದ್ದ ಕಾರಣದಿಂದ ಅವರ ಅನುಪಸ್ಥಿತಿಯಲ್ಲಿ ಪಿಯೂಷ್ ಗೋಯಲ್ ಬಜೆಟ್ ಮಂಡಿಸಿದ್ದರು.

ABOUT THE AUTHOR

...view details