ಕರ್ನಾಟಕ

karnataka

ETV Bharat / bharat

ಜಿಲ್ಲಾ ಕಾರಾಗ್ರಹವನ್ನು ಸ್ಫೋಟಿಸುವುದಾಗಿ ಬೆದರಿಕೆ ; ಮಾಜಿ ಡಿಎಸ್​ಪಿ ಪುತ್ರ ಅರೆಸ್ಟ್​! - ಗುರುಗಾಂವ್ ಮಾಜಿ ಡಿಎಸ್​ಪಿ ಪುತ್ರ ಅರೆಸ್ಟ್

ವಿಷಯವು ತುಂಬಾ ಗಂಭೀರವಾಗಿದೆ. ನಾವು ಆಡಿಯೋ ರೆಕಾರ್ಡಿಂಗ್‌ನಲ್ಲಿನ ಧ್ವನಿ ವಿಶ್ಲೇಷಿಸಿದ್ದೇವೆ. ಇದು ರವಿಯ ಧ್ವನಿಯೊಂದಿಗೆ ಹೊಂದಿಕೆಯಾಗಿದೆ. ನಾವು ಜೈಲಿನ ಸುತ್ತಮುತ್ತಲಿನ ನಮ್ಮ ಗುಪ್ತಚರ ಅಧಿಕಾರಿಗಳನ್ನು ಎಚ್ಚರಿಸಿ ಆತನನ್ನು ಬಂಧಿಸಿದ್ದೇವೆ..

arrest
ಅರೆಸ್ಟ್

By

Published : Aug 2, 2020, 7:02 PM IST

ನವದೆಹಲಿ :ಜಿಲ್ಲಾ ಕಾರಾಗೃಹವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಮಾಜಿ ಉಪ ಪೊಲೀಸ್ ವರಿಷ್ಠಾಧಿಕಾರಿಯ ಪುತ್ರನನ್ನು ಬಂಧಿಸಲಾಗಿದೆ.

ಆರೋಪಿ ರವಿ ಆನಂದ್ ಚೌತಲಾ, ಗುರುಗಾಂವ್​ ಜಿಲ್ಲಾ ಕಾರಾಗೃಹವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿರುವ ಆಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ಇದಲ್ಲದೆ ಇತ್ತೀಚೆಗೆ ಬಂಧನಕ್ಕೊಳಗಾಗಿದ್ದ ಆತನ ತಂದೆ ಸೇರಿದಂತೆ ಜೈಲಿನ ಇತರ ಖೈದಿಗಳನ್ನು ಬಿಡುಗಡೆ ಮಾಡುವಂತೆ ಬೇಡಿಕೆ ಇಟ್ಟಿದ್ದ. ಆತನ ತಂದೆ ಧರಮ್‌ವೀರ್ ಚೌತಲಾ, ಗುರುಗಾಂವ್​ ಜೈಲಿನ ಉಪ ಅಧೀಕ್ಷಕನಾಗಿ ಕೆಲಸ ಮಾಡುತ್ತಿದ್ದರು. ಆ ವೇಳೆ ಜೈಲಿನಲ್ಲಿರುವ ಖೈದಿಗಳಿಗೆ ಮೊಬೈಲ್ ಫೋನ್, ಸಿಮ್ ಕಾರ್ಡ್‌ಗಳು ಮತ್ತು ನಿಷಿದ್ಧ ವಸ್ತುಗಳನ್ನು ಸರಬರಾಜು ಮಾಡಿದ್ದ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಪರಾಧ ವಿಭಾಗದ ಎಸಿಪಿ ಪ್ರೀತ್ ಪಾಲ್ ಸಿಂಗ್ ಸಾಂಗ್ವಾನ್, ವಿಷಯವು ತುಂಬಾ ಗಂಭೀರವಾಗಿರುವುದರಿಂದ ನಾವು ಆಡಿಯೋ ರೆಕಾರ್ಡಿಂಗ್‌ನಲ್ಲಿನ ಧ್ವನಿಯನ್ನು ವಿಶ್ಲೇಷಿಸಿದ್ದೇವೆ. ಇದು ರವಿಯ ಧ್ವನಿಯೊಂದಿಗೆ ಹೊಂದಿಕೆಯಾಗಿದೆ. ನಾವು ಜೈಲಿನ ಸುತ್ತಮುತ್ತಲಿನ ನಮ್ಮ ಗುಪ್ತಚರ ಅಧಿಕಾರಿಗಳನ್ನು ಎಚ್ಚರಿಸಿ ಆತನನ್ನು ಬಂಧಿಸಿದ್ದೇವೆ ಎಂದು ಹೇಳಿದ್ದಾರೆ.

ABOUT THE AUTHOR

...view details