ಕರ್ನಾಟಕ

karnataka

ETV Bharat / bharat

ದೇಶದ ಮೊದಲ ಮುಸ್ಲಿಂ ಮಹಿಳಾ ಮುಖ್ಯಮಂತ್ರಿ ಸೈದಾ ಅನ್ವಾರಾ ನಿಧನ - ಅಸ್ಸೋಂ ಮುಸ್ಲಿಂ ಮಹಿಳಾ ಸಿಎಂ ನಿಧನ

1980ರ ಡಿಸೆಂಬರ್​​​​ 6ರಂದು ಅಸ್ಸೋಂನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ದೇಶದಲ್ಲಿ ಸಿಎಂ ಸ್ಥಾನಕ್ಕೇರಿದ ಮೊದಲ ಮುಸ್ಲಿಂ ಮಹಿಳೆ ಎಂಬ ಸಾಧನೆ ಮಾಡಿದ್ದ ಸೈದಾ ಅನ್ವಾರಾ ತೈಮೂರ್​ ನಿಧನರಾಗಿದ್ದಾರೆ.

Syeda Anwara Taimur
Syeda Anwara Taimur

By

Published : Sep 28, 2020, 7:51 PM IST

ಗುವಾಹಟಿ(ಅಸ್ಸೋಂ):ಅಸ್ಸೋಂ ಮಾಜಿ ಮುಖ್ಯಮಂತ್ರಿ ಸೈದಾ ಅನ್ವಾರಾ ತೈಮೂರ್​​​ ತಮ್ಮ 83ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ದೇಶದ ಮೊದಲ ಮಹಿಳಾ ಮುಖ್ಯಮಂತ್ರಿ ಎಂಬ ಹಿರಿಮೆಗೆ ಪಾತ್ರರಾಗಿದ್ದ ಇವರು 1980ರ ಡಿಸೆಂಬರ್​​ 6ರಂದು ಅಸ್ಸೋಂನ ಮುಖ್ಯಮಂತ್ರಿಯಾಗಿ ಅಧಿಕಾರಿ ಸ್ವೀಕರಿಸಿದ್ದರು.

ಕಳೆದ ಕೆಲ ವರ್ಷಗಳಿಂದ ತಮ್ಮ ಮಗನೊಂದಿಗೆ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದ ಇವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. 1936ರ ನವೆಂಬರ್​​ 24ರಂದು ಜನಸಿದ್ದ ಅನ್ವಾರಾ ಭಾರತೀಯ ಇತಿಹಾಸದಲ್ಲೇ ಮುಖ್ಯಮಂತ್ರಿಯಾಗಿ ನೇಮಕಗೊಂಡ ಮೊದಲ ಮುಸ್ಲಿಂ ಮಹಿಳೆಯರಾಗಿದ್ದಾರೆ.

1980ರಿಂದ 1981ರ ಜೂನ್​​ 30ರವರೆಗೆ ಇವರು ಅಧಿಕಾರದಲ್ಲಿದ್ದರು. ಇದಾದ ಬಳಿಕ 1983ರಿಂದ 1985ರವರೆಗೆ ರಾಜ್ಯದ ಪಿಡಬ್ಲ್ಯೂಡಿ ಸಚಿವೆಯಾಗಿ ಸೇವೆ ಸಲ್ಲಿಸಿದ್ದಾರೆ. 1956ರಲ್ಲಿ ಜೋರ್ಹತ್​ನ ವಿದ್ಯಾರ್ಥಿನಿಯರ ಕಾಲೇಜ್​ನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. 1972, 1978, 1983 ಮತ್ತು 1991 ರಲ್ಲಿ ಅಸ್ಸೋಂ ಅಸೆಂಬ್ಲಿಯ (ಶಾಸಕ) ಚುನಾಯಿತ ಸದಸ್ಯರಾಗಿದ್ದರು. 1988 ರಲ್ಲಿ ರಾಜ್ಯಸಭಾ ನಾಮನಿರ್ದೇಶನಗೊಂಡಿದ್ದರು.

For All Latest Updates

ABOUT THE AUTHOR

...view details