ಕರ್ನಾಟಕ

karnataka

ಕೇರಳ: ಗಾಯಗೊಂಡು ಒದ್ದಾಡುತ್ತಿದ್ದ ಕಾಡಾನೆಯನ್ನು ರಕ್ಷಿಸಿದ ಅರಣ್ಯಾಧಿಕಾರಿಗಳು

By

Published : Jun 5, 2020, 7:28 PM IST

ಕೇರಳದಲ್ಲಿ ನಡೆದ ಗರ್ಭಿಣಿ ಆನೆಯ ಹತ್ಯೆ ಪ್ರಕರಣದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿರುವ ನಡುವೆ, ತೀವ್ರವಾಗಿ ಗಾಯಗೊಂಡ ಕಾಡಾನೆಯೊಂದನ್ನು ರಾಜ್ಯದ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿರುವ ಘಟನೆ ನಡೆದಿದೆ.

elephant
ಆನೆ

ತಿರುವನಂತಪುರಂ:ತೀವ್ರವಾಗಿ ಗಾಯಗೊಂಡ ಕಾಡಾನೆಯೊಂದನ್ನು ರಾಜ್ಯದ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ.

ಇಲ್ಲಿನ ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನದ ನಿಲಾಂಬೂರ್ ದಕ್ಷಿಣ ವಿಭಾಗದ ಬಳಿ ತೀವ್ರವಾಗಿ ಗಾಯಗೊಂಡ ಕಾಡಾನೆಯೊಂದು ಅರಣ್ಯಾಧಿಕಾರಿಗಳ ಕಣ್ಣಿಗೆ ಬಿದ್ದಿದೆ. ಆನೆಯನ್ನು ಅರಣ್ಯ ಅಧಿಕಾರಿಗಳು ರಕ್ಷಿಸಿದ ಬಗ್ಗೆ ಕೇರಳ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಸಚಿವ ಕೆ.ರಾಜು ತಮ್ಮ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಮಾಹಿತಿ ನೀಡಿದ್ದಾರೆ.

ಕೇರಳದ ಪಾಲಕ್ಕಡ್‌ನಲ್ಲಿ ಗರ್ಭಿಣಿ ಆನೆಗೆ ಅನಾನಸ್​​ ಹಣ್ಣಿನಲ್ಲಿ ಪಟಾಕಿ ಇಟ್ಟು ಸೇವಿಸಲು ನೀಡಿ, ಆನೆಯನ್ನು ಕೊಂದಿರುವ ದುಷ್ಕೃತ್ಯದ ಬಗ್ಗೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಯುತ್ತಿರುವುದರ ನಡುವೆ ಈ ಘಟನೆ ಬೆಳಕಿಗೆ ಬಂದಿದೆ.

ಅಧಿಕಾರಿಗಳಿಂದ ರಕ್ಷಿಸಲ್ಪಟ್ಟ ಕಾಡಾನೆಯ ಹೊಟ್ಟೆಯ ಕೆಳಭಾಗದಲ್ಲಿ ದೊಡ್ಡ ಮಟ್ಟದ ಗಾಯಗಳಾಗಿವೆ. ಬಾಯಿ ಹಾಗೂ ನಾಲಗೆಗೂ ಗಾಯಗಳಾಗಿರುವುದರಿಂದ ಆನೆಗೆ ಆಹಾರ ತಿನ್ನಲು ಹಾಗೂ ನೀರು ಕುಡಿಯಲು ಆಗುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details