ಕರ್ನಾಟಕ

karnataka

ETV Bharat / bharat

ಕೊರೊನಾ ವೈರಸ್‍ನ ನೈಸರ್ಗಿಕ ಉಗಮ ಹಾಗೂ ವಿಕಾಸ: ಒಂದು ವೈಜ್ಞಾನಿಕ ಅಧ್ಯಯನ - what is corona virus

ಕೋವಿಡ್ 19 ರೋಗವು 1960ರ ದಶಕದಲ್ಲಿ ಪತ್ತೆ ಮಾಡಲ್ಪಟ್ಟ ವೈರಸ್‍ಗಳ ಗುಂಪಿನ ಹೊಸ ಪ್ರಬೇಧದಿಂದ ಹರಡುತ್ತದೆ. ಕೊರೊನಾ ವೈರಸ್‍ಗಳಿಗೆ ಆ ಹೆಸರು ನೀಡಲು ಒಂದು ಆಸಕ್ತಿದಾಯಕ ಕಾರಣವಿದೆ. ಅತ್ಯಂತ ಶಕ್ತಿಶಾಲಿ ಸೂಕ್ಷ್ಮದರ್ಶಕದ ಮೂಲಕ ನೋಡಿದಾಗ ಈ ವೈರಸ್‍ಗಳ ಸುತ್ತ ಒಂದು ಕಿರೀಟ ರೀತಿಯ (ಕೊರೊನಾ/ ಕ್ರೌನ್) ಸಕ್ಕರೆ ಪ್ರೊಟೀನ್‍ನ ತೆಳುವಾದ ಪರದೆ ಕಾಣಸಿಗುತ್ತದೆ. ಹೀಗಾಗಿ ಅವುಗಳಿಗೆ ಕೊರೊನಾ ವೈರಸ್ ಎಂದು ನಾಮಕರಣ ಮಾಡಲಾಯಿತು.

for-upload-natural-origin-and-evolution-of-corona-virus
ಕೊರೊನಾ ವೈರಸ್‍

By

Published : Apr 11, 2020, 12:11 PM IST

ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ 19ನ್ನು ಒಂದು ಸಾಂಕ್ರಾಮಿಕ ರೋಗ ಎಂದು ಈಗಾಗಲೆ ಘೋಷಿಸಿದೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಇದರ ಬಗ್ಗೆಗಿನ ಸುದ್ದಿನಗಳನ್ನು ಓದುವ ಜನ ಸಾಮಾನ್ಯರು ಇದೊಂದು ಜೈವಿಕ ಯುದ್ದ ಎಂದು ಭಾವಿಸಿ ದೊಡ್ಡ ಮಟ್ಟಿನ ಭೀತಿಗೊಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈಟಿವಿ ಭಾರತ್ ಒಂದು ವೈಜ್ಞಾನಿಕ ಅಧ್ಯಯನ ನಡೆಸಿ, ಸಂಶೋಧಕರು ಕೊರೊನಾ ವೈರಸ್‍ನ ನೈಸರ್ಗಿಕ ಉಗಮ ಹಾಗೂ ವಿಕಸನದ ಬಗ್ಗೆ ವಿಶ್ವಾದ್ಯಂತ ದಾಖಲಿಸಿರುವ ಮಾಹಿತಿಗಳನ್ನು ಇಲ್ಲಿ ನೀಡುತ್ತಿದೆ.

ಕೋವಿಡ್ 19

ಕೋವಿಡ್ 19 ರೋಗವು 1960ರ ದಶಕದಲ್ಲಿ ಪತ್ತೆ ಮಾಡಲ್ಪಟ್ಟ ವೈರಸ್‍ಗಳ ಗುಂಪಿನ ಹೊಸ ಪ್ರಬೇಧದಿಂದ ಹರಡುತ್ತದೆ. ಕೊರೊನಾ ವೈರಸ್‍ಗಳಿಗೆ ಆ ಹೆಸರು ನೀಡಲು ಒಂದು ಆಸಕ್ತಿದಾಯಕ ಕಾರಣವಿದೆ. ಅತ್ಯಂತ ಶಕ್ತಿಶಾಲಿ ಸೂಕ್ಷ್ಮದರ್ಶಕದ ಮೂಲಕ ನೋಡಿದಾಗ ಈ ವೈರಸ್‍ಗಳ ಸುತ್ತ ಒಂದು ಕಿರೀಟ ರೀತಿಯ (ಕೊರೊನಾ/ ಕ್ರೌನ್) ಸಕ್ಕರೆ ಪ್ರೊಟೀನ್‍ನ ತೆಳುವಾದ ಪರದೆ ಕಾಣಸಿಗುತ್ತದೆ. ಹೀಗಾಗಿ ಅವುಗಳಿಗೆ ಕೊರೊನಾ ವೈರಸ್ ಎಂದು ನಾಮಕರಣ ಮಾಡಲಾಯಿತು.

ಕೊರೊನಾ ವೈರಸ್‍ಗಳು ಮನುಷ್ಯನ ದೇಹದುದ್ದಗಲಕ್ಕೂ ಸಂಚರಿಸುತ್ತವೆ ಹಾಗೂ ಕೆಮ್ಮು, ಹಾಗೂ ಉರಿ ಮೂಗಿನ ಲಕ್ಷಣದೊಂದಿಗೆ ಅನಾರೋಗ್ಯ ಉಂಟು ಮಾಡುತ್ತವೆ. ಪ್ರಾಣಿಗಳಲ್ಲೂ ಸಾಮಾನ್ಯವಾಗಿ ಈ ವೈರಸ್‍ಗಳು ಕಾಣಸಿಗುತ್ತವೆ. ಮನುಷ್ಯನಿಗೆ ಪ್ರಾಣಿಗಳಿಂದಲೇ ಅದರಲ್ಲೂ ಮುಖ್ಯವಾಗಿ ಬಾವಲಿಗಳಿಂದ ಹರಡಿತು ಎಂಬ ಸಂಶಯವಿದೆ.

ಚೀನಾ ಸರಕಾರ ಸಂಶೋಧಕರಿಗೆ ಬಿಡುಗಡೆ ಮಾಡಿದ ವೈರಸ್‍ನ ಜೀವಾಂಶ ಮಾದರಿ

  1. ಡಿಸೆಂಬರ್ 31,2019ರಲ್ಲಿ ಚೀನಾದ ಅಧಿಕಾರಿಗಳು ವಿಶ್ವ ಆರೋಗ್ಯ ಸಂಸ್ಥೆಯನ್ನು ಈ ಹಿಂದೆ ಎಂದೂ ವರದಿಯಾಗದ ಕೊರೊನಾ ವೈರಸ್‍ನ ಮಾದರಿಯ ಬಗ್ಗೆ ಎಚ್ಚರಿಸಿದರು. ಈ ವೈರಸ್ ಮಾದರಿಗಳು ತೀವ್ರ ಅನಾರೋಗ್ಯ ಉಂಟು ಮಾಡುತ್ತಿವೆ ಎಂದು ಚೀನಾ ಅಧಿಕಾರಿಗಳು ವಿಶ್ವ ಆರೋಗ್ಯ ಸಂಸ್ಥೆಗೆ ಮಾಹಿತಿ ನೀಡಿದರು. ಬಳಿಕ ಈ ವೈರಸ್‍ಗೆ ಎಸ್‍ಎಆರ್‍ಎಸ್ -ಸಿಒವಿ-2 ಎಂದು ನಾಮಕರಣ ಮಾಡಲಾಯಿತು.
  2. ಚೀನಾದಲ್ಲಿ ಸಾಂಕ್ರಾಮಿಕ ರೋಗ ಹಬ್ಬುತ್ತಿದ್ದಂತೆ, ಚೀನಾದ ವಿಜ್ಞಾನಿಗಳು ಈ ವೈರಸ್‍ನ ಜೀವಾಂಶ ಮಾದರಿಯನ್ನು ದಾಖಲಿಸಿ, ವಿಶ್ವದಾದ್ಯಂತ ಸಂಶೋಧಕರಿಗೆ ಒದಗಿಸಿದರು.
  3. ಈ ವೈರಸ್‍ನ ಜೀವಾಂಶ ಮಾದರಿಯ ಅಧ್ಯಯನದಿಂದ ತಿಳಿದು ಬಂದ ಅಂಶವೆಂದರೆ, ಚೀನಾದ ಅಧಿಕಾರಿಗಳು, ಈ ಸಾಂಕ್ರಾಮಿಕ ರೋಗವನ್ನು ಕೂಡಲೇ ಪತ್ತೆ ಹಚ್ಚಿ, ಅದು ಮನುಷ್ಯರಿಂದ ಮನುಷ್ಯರಿಗೆ ಹಬ್ಬುತ್ತಿರುವುದನ್ನು ಖಚಿತ ಪಡಿಸಿದ್ದರು.
  4. ವಿಶ್ವದಾದ್ಯಂತದ ಹಲವಾರು ಸಂಶೋಧಕರು, ಈ ಜೀವಾಂಶ ಮಾದರಿಯನ್ನು ಅಧ್ಯಯನ ನಡೆಸಿ, ಎಸ್‍ಎಆರ್‍ಎಸ್ -ಸಿಒವಿ-2ನ ಹುಟ್ಟು ಹಾಗೂ ಹರಡುವಿಕೆಯ ಬಗ್ಗೆ ಅಧ್ಯಯನ ನಡೆಸಿದರು ಹಾಗೂ ಈ ವೈರಸ್‍ನ ಗುಣ ಲಕ್ಷಣ ಪತ್ತೆ ಹಚ್ಚಿದರು.

ಎಸ್‍ಎಆರ್‍ಎಸ್ -ಸಿಒವಿ-2 ನೈಸರ್ಗಿಕ ಪ್ರಕ್ರಿಯೆ ಮೂಲಕವೇ ಉದ್ಭವಿಸಿತು.

  1. ಚೀನಾದ ವುಹಾನ್ ನಗರದಲ್ಲಿ ದಿ ನಾವೆಲ್ ಎಸ್‍ಎಆರ್‍ಎಸ್ -ಸಿಒವಿ-2 ಕೊರೊನಾ ವೈರಸ್ ಕಳೆದ ವರ್ಷ ಉದ್ಭವಿಸಿತು. ಹಾಗೂ ಬಳಿಕ ದೊಡ್ಡ ಮಟ್ಟದಲ್ಲಿ ಕೋವಿಡ್ 19 ಸಾಂಕ್ರಾಮಿಕ ರೋಗವನ್ನು ಹರಡಿತು. ಈಗ ಈ ಸಾಂಕ್ರಾಮಿಕ ಪಿಡುಗು 70ಕ್ಕೂ ಹೆಚ್ಚು ದೇಶಗಳಿಗೆ ಹರಡಿದೆ.
  2. ಸ್ಕ್ರಿಪ್ಸ್ ಸಂಶೋಧನಾ ಸಂಸ್ಥೆಯ ಕ್ರಿಶ್ಚಿಯನ್ ಆಂಡರ್‍ಸನ್, ಪಿಎಚ್‍ಡಿ, ಪ್ರಾಧ್ಯಾಪಕ, ಇಮ್ಯುನಾಲಜಿ ಹಾಗೂ ಮೈಕ್ರೋಬಯಾಲಜಿ ವಿಭಾಗದ ಪ್ರಕಾರ ಎಸ್‍ಎಆರ್‍ಎಸ್ -ಸಿಒವಿ-2 ವೈರಸ್‍ನ ಜೀವಾಂಶ ಅಧ್ಯಯನದಿಂದ ತಿಳಿದು ಬಂದ ಅಂಶವೆಂದರೆ ಅದು ಯಾವುದೇ ಪ್ರಯೋಗಾಲಯದಲ್ಲಿ ಸೃಷ್ಟಿಯಾದ ಅಥವಾ ಕೃತಕವಾಗಿ ಸೃಷ್ಟಿಸಲಾದ ವೈರಸ್ ಅಲ್ಲ.
  3. ಎಸ್‍ಎಆರ್‍ಎಸ್ -ಸಿಒವಿ-2 ವೈರಸ್‍ನ ಜೀವಾಂಶ ಅಧ್ಯಯನದಿಂದ ತಿಳಿದು ಬಂದ ಅಂಶವೆಂದರೆ, ಇದು ಕೊರೊನಾ ವೈರಸ್ ಪ್ರಬೇಧಕ್ಕೆ ಸೇರಿದ ವೈರಸ್ ಆಗಿದ್ದು, ಅದೊಂದು ನೈಸರ್ಗಿಕವಾಗಿ ಸೃಷ್ಟಿಯಾದ ವೈರಸ್.
  4. ಬ್ರಿಟನ್ ಮೂಲದ ವೆಲ್‍ಕಮ್ ಟ್ರಸ್ಟ್‍ನ ಸಾಂಕ್ರಾಮಿಕ ರೋಗ ವಿಭಾಗದ ಜೋಸಿ ಗೋಲ್ಡಿಂಗ್, ಪಿಎಚ್‍ಡಿ, ಪ್ರಕಾರ, ಆಂಡರ್‍ಸನ್ ಹಾಗೂ ಅವರ ಸಹೋದ್ಯೋಗಿಗಳ ಅಧ್ಯಯನ, ಅತ್ಯಂತ ಮಹತ್ವದ್ದು. ಏಕೆಂದರೆ, ಕೋವಿಡ್19 ಸಾಂಕ್ರಾಮಿಕ ರೋಗದ ಮೂಲವಾದ ವೈರಸ್ ಬಗ್ಗೆಗಿನ ಗಾಳಿಸುದ್ದಿಗಳಿಗೆ ಇದು ತೆರೆ ಎಳೆದಿದೆ.
  5. ಸೈನ್ಸ್ ಡೈಲಿಯಲ್ಲಿ ಸ್ಕ್ರಿಪ್ಸ್ ಸಂಶೋಧನಾ ಸಂಸ್ಥೆಯ ತಜ್ಞರು ಪ್ರಕಟಿಸಿರುವ ಸಂಶೋಧನಾ ವರದಿಯು, ಕೊರೊನಾ ವೈರಸ್ ನೈಸರ್ಗಿಕ ವಿಕಸನದ ಮೂಲಕ ಈ ವೈರಸ್ ಸೃಷ್ಟಿಯಾಗಿದೆ ಎಂಬ ನಿರ್ಣಯಕ್ಕೆ ಬರಲಾಗಿದೆ.

ಮರ್ಸ್ ಹಾಗೂ ಸಾರ್ಸ್

  1. ಮೂರು ನಾವೆಲ್ ಕೊರೊನಾ ವೈರಸ್‍ಗಳು ಈ ಶತಮಾನದಲ್ಲಿ ವಿಕಸನಗೊಂಡಿವೆ.
  2. ಕೊರೊನಾ ವೈರಸ್‍ಗಳೆಂದರೆ, ಅನಾರೋಗ್ಯ ಉಂಟು ಮಾಡಬಲ್ಲ ಒಂದು ದೊಡ್ಡ ಕುಟುಂಬದ ನಾನಾ ವೈರಸ್‍ಗಳು
  3. ಕೊರೊನಾ ವೈರಸ್‍ನಿಂದ ಎದುರಾದ ಮೊತ್ತಮೊದಲ ತೀವ್ರ ಅನಾರೋಗ್ಯವೆಂದರೆ ಬಾಧೆಯೆಂದರೆ ಚೀನಾದಲ್ಲಿ 2003ರಲ್ಲಿ ಹರಡಿದ ಸಿವಿಯರ್ ರೆಸಿಪ್ರಿರೆಟೊರಿ ಸಿಂಡ್ರೋಮ್ (ಸಾರ್ಸ್) ಸಾಂಕ್ರಾಮಿಕ ರೋಗ.
  4. ಎರಡನೇ ಸಾಂಕ್ರಾಮಿಕ ರೋಗವೆಂದರೆ 2012ರಲ್ಲಿ ಸೌದಿ ಅರೇಬಿಯಾದಲ್ಲಿ ಹರಡಿದ ಮಿಡ್ಲ್ ಈಸ್ಟ್ ರೆಸಿಪ್ರಿಟೊರಿ ಸಿಂಡ್ರೋಮ್ (ಮೆರ್ಸ್)
  5. 2002-03ರಲ್ಲಿ ಸಾರ್ಸ್-ಸಿಒವಿ ಚೀನಾದಲ್ಲಿ ಕಾಣಿಸಿಕೊಂಡಿತು. ಬಳಿಕ ಅದು ಉತ್ತರ ಅಮೇರಿಕಾ, ದಕ್ಷಿಣ ಅಮೇರಿಕಾ ಹಾಗೂ ಯುರೋಪ್‍ಗಳಲ್ಲಿ ಹರಡಿತು. 8,000ಕ್ಕೂ ಅಧಿಕ ಮಂದಿ ಈ ರೋಗದಿಂದ ಸೋಂಕಿತರಾದರು. ಈ ಪೈಕಿ ಸುಮಾರು 10% ಸಾವನ್ನಪ್ಪಿದರು.
  6. 2012ರಲ್ಲಿ ಮೆರ್ಸ್-ಸಿಒವಿ ಸೌದಿ ಅರೇಬಿಯಾದಲ್ಲಿ ಒಂಟೆಗಳಿಂದ ಮನುಷ್ಯನಿಗೆ ಹರಡಿತು. 2013ರಲ್ಲಿ ಇದು ದಕ್ಷಿಣ ಕೊರಿಯಾಕ್ಕೆ ಹರಡಿತು. ಸುಮಾರ 2,500 ಮಂದಿ ಈ ಸೋಂಕಿನಿಂದ ಬಳಲಿದರು. 34% ದಷ್ಟು ರೋಗಿಗಳು ಸಾವನ್ನಪ್ಪಿದರು.

ಕೊರೊನಾ ಕುಟುಂಬದ ಸಾಂಕ್ರಾಮಿಕ ರೋಗಗಳ ತುಲನೆ (ಆಧಾರ: ವಿಶ್ವ ಆರೋಗ್ಯ ಸಂಸ್ಥೆ)

ರೋಗ ಕೋವಿಡ್ 19 ಸಾರ್ಸ್ ಮೆರ್ಸ್

ಕೊರೊನಾ ವೈರಸ್‍ನ ನೈಸರ್ಗಿಕ ಉಗಮ ಹಾಗೂ ವಿಕಾಸ

ಕೋವಿಡ್ 19: ದೇಹದ ರಕ್ಷಣಾ ವ್ಯವಸ್ಥೆ ಮರು ಹೋರಾಡಬಹುದು

ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದ ಸಂಶೋಧಕರು, ಆಸ್ಟ್ರೇಲಿಯಾದ ಮೊದಲ ಕೋವಿಡ್ 19 ಪಾಸಿಟಿವ್ ರೋಗಿಯ ದೇಹದ ರಕ್ಷಣಾ ವ್ಯವಸ್ಥೆ ವೈರಸ್ ವಿರುದ್ಧ ಹೇಗೆ ಪ್ರತಿಕ್ರಿಯಿಸಿತು ಎಂಬುದನ್ನು ಅಧ್ಯಯನ ನಡೆಸಿ ದಾಖಲೀಕರಿಸಿದ್ದಾರೆ. ಅವರ ದಾಖಲೀಕರಣದ ಪ್ರಕಾರ, ದೇಹದ ರಕ್ಷಣಾ ವ್ಯವಸ್ಥೆ ವೈರಸ್‍ನ್ನು ಸೋಲಿಸಿ, ಸೋಂಕಿನಿಂದ ಮುಕ್ತವಾಗಬಹುದು. ಮೂರು ತೆರನಾದ ನೋವೆಲ್ ಕೊರೊನಾ ವೈರಸ್‍ಗಳಿಗೆ ಲಸಿಕೆ ಇಲ್ಲ.

ಅಮೇರಿಕಾದ ಸೂಕ್ಷ್ಮಜೀವ ವಿಜ್ಞಾನ ಸೊಸೈಟಿಯ ಆಂಟಿಮೈಕ್ರೋಬಯಾಲಾಜಿಕಲ್ ಏಜೆಂಟ್ಸ್ ಹಾಗೂ ಕಿಮೋಥೆರಪಿ ಪತ್ರಿಕೆಯ ಪ್ರಕಾರ

  • ಕೋವಿಡ್ 19 ಸಾಂಕ್ರಾಮಿಕ ರೋಗವನ್ನು ಉಂಟುಮಾಡುವ ಎಸ್‍ಎಆರ್‍ಎಸ್ -ಸಿಒವಿ-2 ವೈರಸ್ ಅತ್ಯಂತ ವೇಗವಾಗಿ ಹರಡುತ್ತದೆ. ಆದರೆ ಇದರ ಸಹೋದರ ವೈರಸ್‍ಗಳಿಗೆ ಹೋಲಿಸಿದರೆ, ಇದರಿಂದ ಸಾವಿನ ಪ್ರಮಾಣ ಕಡಿಮೆ. ಈ ವಾರ ಆಂಟಿಮೈಕ್ರೋಬಯಾಲಾಜಿಕಲ್ ಏಜೆಂಟ್ಸ್ ಹಾಗೂ ಕಿಮೋಥೆರಪಿ ಪತ್ರಿಕೆಯಲ್ಲಿ ಪ್ರಕಟವಾದ ಸಂಶೋಧನಾ ಲೇಖನದ ಪ್ರಕಾರ, ಕೊರೊನಾ ವೈರಸ್ ಮನುಷ್ಯರಲ್ಲಿ ಶ್ವಾಸಕೋಶದ ಸೋಂಕುಂಟು ಮಾಡುತ್ತದೆ.
  • ಎಸ್‍ಎಆರ್‍ಎಸ್ -ಸಿಒವಿ-2 ಸೋಂಕಿಗೆ ತುತ್ತಾದ ವ್ಯಕ್ತಿಗಳು, 2ರಿಂದ 14 ದಿನ ಕೋವಿಡ್ 19 ರೋಗದ ಲಕ್ಷಣ ತೋರಿಸುವುದಿಲ್ಲ. ಆದರೆ ಅದೇ ಅವಧಿಯಲ್ಲಿ ಅವರು ಈ ವೈರಸ್ ಅನ್ನು ಇತರರಿಗೆ ಹರಡುವ ಸಾಧ್ಯತೆ ಇರುತ್ತದೆ.
  • ಕೋವಿಡ್ 19 ರೋಗಿಗಳನ್ನು ಉಪಚರಿಸಲು ಅತ್ಯಂತ ಭರವಸೆದಾಯಕ ಔಷಧಗಳೆಂದರೆ, ಆಂಟಿ ವೈರಲ್, ರೆಮ್ಡೆಸಿವಿರ್ ಇತ್ಯಾದಿಗಳು. ಎಬೋಲ ವೈರಸ್‍ನ ಸೋಂಕಿಗೆ ಸೂಕ್ತವಾದ ಔಷಧಗಳ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ.

ಲಸಿಕೆ ಸಂಶೋಧನೆ

  1. ನೋವಾಕ್ಸ್ ಸಂಸ್ಥೆ ಕೊರೊನಾ ವೈರಸ್‍ಗೆ ಲಸಿಕೆ ಅಭಿವೃದ್ಧಿ ಸ್ಪರ್ಧೆಗೆ ಇಳಿದಿದೆ.
  2. ಹಲವಾರು ಸಾಂಕ್ರಾಮಿಕ ರೋಗಗಳಿಗೆ ಲಸಿಕೆ ಅಭಿವೃದ್ಧಿ ಪಡಿಸಿರುವ ನೋವಾಕ್ಸ್ ಸಂಸ್ಥೆ ಈಗಾಗಲೆ ಕೋವಿಡ್ 19ಕ್ಕೆ ಅಭಿವೃದ್ಧಿ ಪಡಿಸಲಾದ ಲಸಿಕೆಯ ಕ್ಲಿನಿಕಲ್ ಟ್ರಯಲ್ ಪೂರ್ವದ ಪ್ರಾಣಿಗಳ ಮೇಲೆ ಪರೀಕ್ಷೆಗಳು ನಡೆಸುತ್ತಿದೆ.
  3. ಈ ವಸಂತ ಕಾಲ 2020ರ ಅಂತ್ಯದೊಳಗೆ ಮಾನವ ಮೇಲಿನ ಪರೀಕ್ಷೆ ಅರಂಭಿಸುವುದಾಗಿ ಸಂಸ್ಥೆ ತಿಳಿಸಿದೆ.
  4. ಈ ಬಯೋಟೆಕ್ನೋಲಜಿ ಸಂಸ್ಥೆ, ಕೋವಿಡ್ 10ಕ್ಕೆ ಲಸಿಕೆ ಕಂಡು ಹುಡುಕುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನ ಮಾಡುವುದಾಗಿ ತಿಳಿಸಿದೆ.
  5. ಸಂಸ್ಥೆ ಮರುಜೋಡಣೆಗೊಳಿಸಲದ ಪ್ರೊಟಿನ್‍ನ ಅತಿ ಸಣ್ಣ ಭಾಗಗಳನ್ನು ಬಳಸಿಕೊಂಡು, ಕೊರೊನಾ ವೈರಸ್‍ನ ಪ್ರೊಟಿನ್‍ಗೆ ಪ್ರತಿವಿಷ ತಯಾರಿಸುವ ಪ್ರಯತ್ನ ನಡೆಸಿದೆ.
  6. ಈ ಪ್ರತಿವಿಷವನ್ನು ಬಳಸಿಕೊಂಡು, ಕೊರೊನಾ ವೈರಸ್‍ಗೆ ಲಸಿಕೆ ಉತ್ಪಾದಿಸಲು ಸಂಸ್ಥೆ ಯೋಚಿಸುತ್ತಿದೆ.
  7. ನೋವಾಕ್ಸ್ ಸಂಸ್ಥೆಯ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಟ್ಯಾನ್ಲಿ ಈರ್ಕ್ ಪ್ರಕಾರ, ಸಾಸ್ ಹಾಗೂ ಮೆರ್ಸ್ ಉಂಟು ಮಾಡಿದ ಕೊರೊನಾ ವೈರಸ್ ಕುಟುಂಬದ ಇತರ ವೈರಸ್‍ಗಳ ಬಗ್ಗೆಗಿನ ನಮ್ಮ ಸಂಶೋಧನೆಗಳು ಈ ನಿಟ್ಟಿನಲ್ಲಿ ನಮಗೆ ನೆರವಾಗಿದೆ. ಹೀಗಾಗಿ ನಾವು ಲಸಿಕೆ ಸಂಶೋಧಿಸುವ ಪ್ರಾಥಮಿಕ ಕೆಲಸಗಳನ್ನು ಬೇಗನೆ ಮುಗಿಸಲು ನೆರವಾಯಿತು ಎನ್ನುತ್ತಾರೆ ಅವರು.
  8. ಈಗಾಗಲೆ ಪ್ರೊಟಿನ್‍ಗಳ ಆಯ್ಕೆ ಸಂಬಂಧದ ಕೆಲಸಗಳು ಮುಗಿದಿದ್ದು, ಪೂರ್ವ ಪ್ರಾಥಮಿಕ ಹಂತದ ಕ್ಲಿನಿಕಲ್ ಟ್ರಯಲ್‍ಗೆ ಅಗತ್ಯವಾದ ಲಸಿಕೆಗಳ ಉತ್ಪಾದನೆಗೆ ನಾವು ಸಜ್ಜಾಗಿದ್ದೇವೆ.
  9. ಕೋವಿಡ್ 19 ಲಸಿಕೆಯ ಮೊದಲ ಹಂತದ ಕ್ಲಿನಕಲ್ ಟ್ರಯಲ್‍ಗಳು ಮೇ ಅಥವಾ ಜೂನ್ ತಿಂಗಳಲ್ಲಿ ಆರಂಭವಾಗಬಹುದು.

ABOUT THE AUTHOR

...view details