ಕರ್ನಾಟಕ

karnataka

ETV Bharat / bharat

ಸೋಷಿಯಲ್​ ಮೀಡಿಯಾ ಅಲ್ಲ, ಕೊರೊನಾ ವೈರಸ್​ ಕಡೆ ಗಮನ ಹರಿಸಿ: ಮೋದಿಗೆ ರಾಗಾ​​ ಸಲಹೆ - ಕೊರೊನಾ ವೈರಸ್​​

ಭಾರತದಲ್ಲಿ ದಿನೇ ದಿನೆ ಹೆಚ್ಚಿನ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ದೇಶ ತುರ್ತು ಪರಿಸ್ಥಿತಿ ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಸೋಷಿಯಲ್​ ಮೀಡಿಯಾ ಕುರಿತು ಸಮಯ ಹಾಳು ಮಾಡುವುದನ್ನು ಬಿಟ್ಟು, ಕೊರೊನಾ ವೈರಸ್​​ಅನ್ನು ಹೇಗೆ ಎದುರಿಸಬೇಕೆಂಬುದನ್ನು ಯೋಚಿಸಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ರಾಹುಲ್​ ಗಾಂಧಿ ಸಲಹೆ ನೀಡಿದ್ದಾರೆ.

Rahul gandhi latest tweet
ಮೋದಿಗೆ ರಾಗಾ​​ ಸೂಚನೆ

By

Published : Mar 3, 2020, 7:18 PM IST

ನವದೆಹಲಿ: ಸಾಮಾಜಿಕ ಜಾಲತಾಣಗಳೊಂದಿಗಿನ ಕೋಡಂಗಿ ಆಟ ಬಿಟ್ಟು, ಭಾರತದಲ್ಲಿ ಹೊಸದಾಗಿ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿರುವುದರ ಕಡೆ ಗಮನ ಹರಿಸಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸಲಹೆ ನೀಡಿದ್ದಾರೆ.

ಸಿಂಗಾಪುರ ಪ್ರಧಾನಿ ಲೀ ಹ್ಸೀನ್ ಲೂಂಗ್ ಅವರು ಕೊರೊನಾ ವೈರಸ್​​​ಅನ್ನು ಧೈರ್ಯದಿಂದ ಎದುರಿಸುವಂತೆ ಸಲಹೆ ನೀಡುತ್ತಿರುವ ವಿಡಿಯೋವೊಂದನ್ನು ಪೋಸ್ಟ್​ ಮಾಡಿ​​ ಟ್ವೀಟ್​ ಮಾಡಿರುವ ರಾಹುಲ್, ಭಾರತದಲ್ಲಿ ದಿನೇ ದಿನೆ ಹೆಚ್ಚಿನ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ದೇಶ ತುರ್ತು ಪರಿಸ್ಥಿತಿ ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಸೋಷಿಯಲ್​ ಮೀಡಿಯಾ ಕುರಿತು ಸಮಯ ಹಾಳು ಮಾಡುವುದನ್ನು ಬಿಟ್ಟು, ಕೊರೊನಾ ವೈರಸ್​​ಅನ್ನು ಹೇಗೆ ಎದುರಿಸಬೇಕೆಂಬುದನ್ನು ಯೋಚಿಸಿ ಎಂದು ಬರೆದಿದ್ದಾರೆ.

ಸಾಮಾಜಿಕ ಜಾಲತಾಣಗಳಿಂದ ಹೊರಬರಲು ಚಿಂತನೆ ನಡೆಸುತ್ತಿರುವುದಾಗಿ ಸೋಮವಾರ ಟ್ವೀಟ್​ ಮಾಡಿದ್ದ ಪಿಎಂ ಮೋದಿ, ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಗೌರವಾರ್ಥವಾಗಿ ಒಂದು ದಿನ ಫೇಸ್​ಬುಕ್, ಟ್ವಿಟರ್, ಇನ್​ಸ್ಟಾಗ್ರಾಮ್ ಮತ್ತು ಯೂಟ್ಯೂಬ್​ನಲ್ಲಿರುವ ತಮ್ಮ ಖಾತೆಗಳಿಂದ ಹೊರ ಉಳಿಯುವೆ ಎಂದು ಟ್ವೀಟ್​ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಇದನ್ನು ಟೀಕಿಸಿರುವ ರಾಗಾ, ಸೋಷಿಯಲ್​ ಮೀಡಿಯಾ ಅಲ್ಲ, ಕೊರೊನಾ ವೈರಸ್​ ಕಡೆ ಗಮನ ಹರಿಸಿ ಎಂದು ಪ್ರಧಾನಿ ಮೋದಿಗೆ ಸಲಹೆ ನೀಡಿದ್ದಾರೆ.

ABOUT THE AUTHOR

...view details