ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ ಕೇಂದ್ರ ಬಜೆಟ್ನಲ್ಲಿ ಕೃಷಿ ವಲಯಕ್ಕೆ 2.83 ಲಕ್ಷ ಕೋಟಿ ರೂ. ಅನುದಾನ ನೀಡಿರುವುದಾಗಿ ಘೋಷಿಸಿದ್ದು, ದೇಶದ ಕೃಷಿ ಕ್ಷೇತ್ರವನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ 16 ಸೂತ್ರಗಳನ್ನು ಉಲ್ಲೇಖಿಸಿದ್ದಾರೆ.
ನಿರ್ಮಲಾ ಬಜೆಟ್: ಅನ್ನದಾತರ ಶ್ರೇಯೋಭಿವೃದ್ಧಿಗೆ 16 ಸೂತ್ರ
ದೇಶದ ಕೃಷಿ ಕ್ಷೇತ್ರವನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಇಂದಿನ ಬಜೆಟ್ನಲ್ಲಿ 16 ಸೂತ್ರಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ.
ಬಜೆಟ್ 2020
16 ಸೂತ್ರಗಳು:
- ಬರಪೀಡಿತ ಜಿಲ್ಲೆಗಳಿಗೆ ಸಮಗ್ರ ನೀರಾವರಿ ಯೋಜನೆ
- 20 ಲಕ್ಷ ರೈತರಿಗೆ ಉಪಯುಕ್ತವಾಗುವ ಸೋಲಾರ್ ಪಂಪ್ಗಳ ಅಳವಡಿಕೆ
- ಎಲ್ಲಾ ರೀತಿಯ ರಸಗೊಬ್ಬರಗಳ ಸಮತೋಲಿತ ಬಳಕೆಗೆ ಸರ್ಕಾರದ ಪ್ರೋತ್ಸಾಹ
- ಕೃಷಿ ಉಗ್ರಾಣಗಳ ಹೆಚ್ಚಳ
- ಮುದ್ರಾ ಮತ್ತು ನಬಾರ್ಡ್ ನೆರವಿನೊಂದಿಗೆ ಸ್ವಸಹಾಯ ಸಂಘಗಳಿಂದ ಹೊಸ ಗ್ರಾಮ ಸಂಗ್ರಹ ಯೋಜನೆ
- ಎಲ್ಲಾ ರಾಜ್ಯಗಳಲ್ಲಿ ಮೂರು ಮಾದರಿ ಕೃಷಿ ಕಾನೂನುಗಳ ಅಳವಡಿಕೆ
- ರಾಷ್ಟ್ರೀಯ- ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಕೃಷಿ ಉಡಾನ್
- ತೋಟಗಾರಿಕೆ ಕ್ಷೇತ್ರಕ್ಕೆ ಒಂದು ಉತ್ಪನ್ನ- ಒಂದು ಜಿಲ್ಲೆ ಯೋಜನೆ
- ಇ-ನ್ಯಾಮ್ ಮೂಲಕ ಗೋದಾಮಿನ ಕುರಿತ ಹಣಕಾಸು ಮಾತುಕತೆ
- ನಬಾರ್ಡ್ ರಿಫೈನಾನ್ಸ್ ಯೋಜನೆ ವಿಸ್ತರಣೆ- ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಗಾಗಿ 15 ಲಕ್ಷ ರೂ. ಅನುದಾನ
- ಜಾನುವಾರುಗಳ ಕಾಲು ಮತ್ತು ಬಾಯಿ ರೋಗಗಳ ನಿವಾರಣೆಗೆ ಕ್ರಮ
- ಕರಾವಳಿ ಪ್ರದೇಶ ಯುವಕರಿಗೆ ಉದ್ಯೋಗ ಸೃಷ್ಟಿಸಲು ಸಮುದ್ರ ಮೀನುಗಾರಿಕೆಗೆ ಉತ್ತೇಜನ
- ಖಾಸಗಿ ಸಹಭಾಗಿತ್ವದಲ್ಲಿ ಕೃಷಿ ರೈಲು
- ಕುಸುಮ್ ಯೋಜನೆ ವಿಸ್ತರಣೆ
- ಧಾನ್ಯಲಕ್ಷ್ಮಿ ಯೋಜನೆಗೆ ಕೇಂದ್ರ ಸರ್ಕಾರ ನಿರ್ಧಾರ
- ಶೂನ್ಯ ಬಂಡವಾಳದ ಕೃಷಿ ಅಭಿವೃದ್ಧಿಗೆ ಸಹಾಯ
Last Updated : Feb 1, 2020, 2:18 PM IST