ಕರ್ನಾಟಕ

karnataka

ವಲಸೆ ಕಾರ್ಮಿಕರಿಗೆ ಗರೀಬ್‌ ಕಲ್ಯಾಣ್‌ ಯೋಜನೆ; ಈ ಆರು ರಾಜ್ಯಗಳಲ್ಲಿ ಅನುಷ್ಠಾನ

ವಲಸೆ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ 50 ಸಾವಿರ ಕೋಟಿ ಮೊತ್ತದ ಗರೀಬ್​ ಕಲ್ಯಾಣ್​ ಯೋಜನೆ ಜಾರಿಗೆ ತರಲಿದ್ದು, ಇದರ ಲಾಭ ಕರ್ನಾಟಕಕ್ಕೆ ಸಿಗುವುದಿಲ್ಲ.

By

Published : Jun 18, 2020, 4:47 PM IST

Published : Jun 18, 2020, 4:47 PM IST

Updated : Jun 18, 2020, 6:06 PM IST

ETV Bharat / bharat

ವಲಸೆ ಕಾರ್ಮಿಕರಿಗೆ ಗರೀಬ್‌ ಕಲ್ಯಾಣ್‌ ಯೋಜನೆ; ಈ ಆರು ರಾಜ್ಯಗಳಲ್ಲಿ ಅನುಷ್ಠಾನ

FM Nirmala Sitharaman
FM Nirmala Sitharaman

ನವದೆಹಲಿ:ಜೂನ್ 20ರಂದು ಗರೀಬ್​ ಕಲ್ಯಾಣ್​ ರೋಜ್‌ಗಾರ್ ಯೋಜನೆಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಈ ಯೋಜನೆಯ ಲಾಭ ಮಾತ್ರ ಕರ್ನಾಟಕಕ್ಕೆ ಸಿಗುವುದಿಲ್ಲ. ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಮಾಹಿತಿ ನೀಡಿದರು.

ನಿರ್ಮಲಾ ಸೀತಾರಾಮನ್​ ಸುದ್ದಿಗೋಷ್ಠಿ

ಬಿಹಾರದಲ್ಲಿ ಜೂನ್​ 20ರಂದು ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಬಿಹಾರ, ಜಾರ್ಖಂಡ್​, ಉತ್ತರಪ್ರದೇಶ, ಮಧ್ಯಪ್ರದೇಶ, ಒಡಿಶಾ ಹಾಗೂ ರಾಜಸ್ಥಾನದ 116 ಜಿಲ್ಲೆಗಳು ಮಾತ್ರ ಈ ಯೋಜನೆಯ ಲಾಭ ಪಡೆದುಕೊಳ್ಳಲಿವೆ ಎಂದು ತಿಳಿಸಿದರು. ಈ ಯೋಜನೆಯ ಮೂಲಕ ಒಟ್ಟು 125 ದಿನಗಳ ಕಾಲ ಕಾರ್ಮಿಕರಿಗೆ ಉದ್ಯೋಗ ದೊರೆಯಲಿದ್ದು 25 ಯೋಜನೆಗಳು ಇದರಲ್ಲಿ ಸೇರಿವೆ.

ಸ್ವಚ್ಛತೆ, ರಸ್ತೆ, ಗ್ರಾಮ ಪಂಚಾಯತ್‌ಗಳಲ್ಲಿರುವ ಕಟ್ಟಡಗಳ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ, ಕೆರೆಗಳ ನಿರ್ಮಾಣ, ತೋಟಗಾರಿಕಾ ಚಟುವಟಿಕೆಗಳು ನಡೆಯಲಿವೆ. ಕೇಂದ್ರ ಸರ್ಕಾರದ ಈ ಯೋಜನೆಯಡಿಯಲ್ಲಿ 25 ಸಾವಿರ ವಲಸೆ ಕಾರ್ಮಿಕರು ಆರು ವಿವಿಧ ಕಾಮಗಾರಿ ಯೋಜನೆಗಳಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ವಾರ್ಷಿಕ 125 ದಿನಗಳ ಕಾಲ ಅವರಿಗೆ ಉದ್ಯೋಗ ದೊರೆಯಲಿದೆ ಎಂದು ತಿಳಿದು ಬಂದಿದೆ.

Last Updated : Jun 18, 2020, 6:06 PM IST

ABOUT THE AUTHOR

...view details