ಕರ್ನಾಟಕ

karnataka

By

Published : Jun 4, 2019, 5:37 PM IST

ETV Bharat / bharat

ಇನ್ಮೇಲೆ ಹೆಣ್ಮಕ್ಕಳು ಹೆದರಬೇಕಿಲ್ಲ.. ಚಪ್ಪಲಿ ಪಾದ ರಕ್ಷಿಸೋದಷ್ಟೇ ಅಲ್ಲ, ರೇಪಿಸ್ಟ್‌ಗಳನ್ನೂ ಮಣಿಸಿಬಿಡುತ್ತೆ..

ಇತ್ತೀಚಿಗೆ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ  ದೌರ್ಜನ್ಯವು ಮನು ಕುಲವನ್ನೇ ಬೆಚ್ಚಿ ಬೀಳಿಸುತ್ತಿದೆ. ಚಿಕ್ಕ ಹಸುಳೆಗಳನ್ನೂ ಬಿಡದೆ ಅತ್ಯಾಚಾರ ಮಾಡುವ ಕ್ರೂರ ಮೃಗಗಳು ನಮ್ಮ ಸುತ್ತಮುತ್ತ ಇವೆ. ಆದರೆ, ಇಂತಹ ದೌರ್ಜನ್ಯಗಳಿಗೆ ಬ್ರೇಕ್​ ಹಾಕುವ ಒಂದು ಪ್ರಯತ್ನ ಇಲ್ಲಿ ನಡೆದಿದೆ.

ಫ್ಲೈಯಿಂಗ್​ ಕಾಪ್​ ಅಂಡ್​ ವುಮೆನ್ಸ್​ ಡಿಫೆನ್ಸ್​ ಸಿಸ್ಟಂ ಮೆಷಿನ್

ಮೊರಾದಾಬಾದ್,(ಉತ್ತರಪ್ರದೇಶ):ದಿನ ಬೆಳಗಾದರೆ ವಿಶ್ವದ ನಾನಾ ಕಡೆ ಇರುವ ಯುವಕರು ಒಂದಲ್ಲಾ ಒಂದು ರೀತಿಯ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದಾರೆ.

ಇತ್ತೀಚಿಗೆ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯವು ಮನು ಕುಲವನ್ನೇ ಬೆಚ್ಚಿ ಬೀಳಿಸುತ್ತಿದೆ. ಚಿಕ್ಕ ಹಸುಳೆಗಳನ್ನು ಬಿಡದೆ ಅತ್ಯಾಚಾರ ಮಾಡುವ ಕ್ರೂರ ಮೃಗಗಳು ನಮ್ಮ ಸುತ್ತಮುತ್ತ ಇವೆ. ಆದರೆ, ಇಂತಹ ದೌರ್ಜನ್ಯಗಳಿಗೆ ಬ್ರೇಕ್​ ಹಾಕುವ ಒಂದು ಪ್ರಯತ್ನ ಇಲ್ಲಿ ನಡೆದಿದೆ. ಆದೇ ಫ್ಲೈಯಿಂಗ್​ ಕಾಪ್​ ಅಂಡ್​ ವುಮೆನ್ಸ್​ ಡಿಫೆನ್ಸ್​ ಸಿಸ್ಟಂ.

ಉತ್ತರ ಪ್ರದೇಶದ ಮೊರಾದಬಾದ್​ನ ಇಂಜಿನಿಯರಿಂಗ್​ ವಿದ್ಯಾರ್ಥಿಗಳು ಈ ತಂತ್ರಜ್ಞಾನ ಆವಿಷ್ಕರಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ದಿವಾಕರ್​ ಶರ್ಮಾ ಎಂಬ ವಿದ್ಯಾರ್ಥಿ, ಈ ತಂತ್ರಜ್ಞಾನವು ಮಹಿಳೆಯರ ಮೇಲೆ ದೌರ್ಜನ್ಯ ತಡೆಯುವ ಉದ್ದೇಶದಿಂತ ಮಾಡಲಾಗಿದೆ. ಯಂತ್ರವನ್ನು ಮಹಿಳೆಯರ ಚಪ್ಪಲಿಗಳಿಗೆ ಅಳವಡಿಕೆ ಮಾಡಲಾಗಿರುತ್ತದೆ. ಮಹಿಳೆಯ ಮೇಲೆ ದೌರ್ಜನ್ಯ ಎದುರಾದ ಸಮಯದಲ್ಲಿ ಈ ಮೆಷಿನ್​ನ ಬಟನ್​ ಪ್ರೆಸ್​ ಮಾಡಿದಾಗ ಆ ಮಹಿಳೆಗೆ ಅವಳು ಧರಿಸಿರುವ ಚಪ್ಪಲಿಯಿಂದಲೇ ಸಹಾಯವಾಗುತ್ತದೆ.

ಆ ಒಂದು ಬಟನ್‌ ಅತ್ಯಾಚಾರಿಗಳನ್ನ ಮಟ್ಟ ಹಾಕುತ್ತೆ:

ಈ ಫ್ಲೈಯಿಂಗ್​ ಕಾಪ್​ ಅಂಡ್​ ವುಮೆನ್ಸ್​ ಡಿಫೆನ್ಸ್​ ಸಿಸ್ಟಂ ಮೆಷಿನ್​(ಚಪ್ಪಲಿ)ನಲ್ಲಿ ಒಂದು ಪ್ಯಾನಿಕ್​ ಬಟನ್​ ಇದ್ದು, ಮಹಿಳೆಯ ಮೇಲೆ ದೌರ್ಜನ್ಯ ನಡೆಯುವ ಸಮಯದಲ್ಲಿ ಆ ಬಟನ್ ಪ್ರೆಸ್​ ಮಾಡಿ, ಆ ಚಪ್ಪಲಿಯಿಂದ ವ್ಯಕ್ತಿಯನ್ನು ಹೊಡೆದಾಗ ಶಾಕ್​ ಜನರೇಟ್ ಆಗಿ ವ್ಯಕ್ತಿಯನ್ನು ಮಣಿಸುವಲ್ಲಿ ಸಹಾಯಕವಾಗುತ್ತೆ.

ನಂತರ ಆ ಮೆಷಿನ್​ನಿಂದ ಜಿಪಿಎಸ್​ ಸಿಗ್ನಲ್​ ಪಾಸ್​ ಆಗಿ, ಸಮೀಪ ಇರುವ ಡ್ರೋನ್ ಸ್ಥಳಕ್ಕೆ ಆಗಮಿಸುತ್ತದೆ. ನಂತರ ಆ ಡ್ರೋನ್​ನಿಂದ ಅಲಾರಾಂ ಸೌಂಡ್​ ಹೊರ ಬಂದು ಆ ಪ್ರದೇಶದ ಜನರು ಸ್ಥಳಕ್ಕೆ ಆಗಮಿಸಲು ಅನುವು ಮಾಡಿಕೊಡುತ್ತದೆ. ನಂತರ ಮಹಿಳೆ ಇರುವ ಲೊಕೇಶನ್‌ನ ಸಮೀಪದ ಪೊಲೀಸ್​ ಸ್ಟೇಷನ್ ಹಾಗೂ ಮಹಿಳೆಯ ಕುಟುಂಬದವರಿಗೂ​ಗೆ ರವಾನಿಸುತ್ತದೆ.

ABOUT THE AUTHOR

...view details