ಹೈದರಾಬಾದ್ (ತೆಲಂಗಾಣ):2019ರ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ವಿರೋಧಿಸುವವರು ತಮ್ಮ ತಮ್ಮ ಮನೆಗಳ ಹೊರಗೆ ತ್ರಿವರ್ಣ ಧ್ವಜ ಹಾರಿಸಬೇಕೆಂದು ಅಖಿಲ ಭಾರತ ಮಜ್ಲಿಸ್-ಇ-ಇಟ್ಟೇಹಾದ್-ಉಲ್-ನ್ (ಎಐಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಒವೈಸಿ, ಶನಿವಾರ ಕರೆ ನೀಡಿದ್ದಾರೆ. ಈ ಮೂಲಕ ಬಿಜೆಪಿಯವರಿಗೆ ತಾವು ಮಾಡಿರುವುದು 'ತಪ್ಪು ಹಾಗೂ ಕರಾಳ ಕಾನೂನು' ಎಂಬ ಸಂದೇಶ ಮುಟ್ಟಿಸಲು ಒವೈಸಿ ಮುಂದಾಗಿದ್ದಾರೆ.
ಬಿಜೆಪಿಗೆ 'ಕರಾಳ ಕಾನೂನು' ಸಂದೇಶ ಕಳುಹಿಸಲು ತ್ರಿವರ್ಣ ಧ್ವಜ ಹಾರಿಸಿ: ಒವೈಸಿ - ಒವೈಸಿ ನೇತೃತ್ವದ ರ್ಯಾಲಿಯಲ್ಲಿ ಜಾಮಿಯಾ ವಿವಿ ವಿದ್ಯಾರ್ಥಿಗಳು
ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿಸುವವರು ತಮ್ಮ ತಮ್ಮ ಮನೆಗಳ ಹೊರಗೆ ತ್ರಿವರ್ಣ ಧ್ವಜ ಹಾರಿಸಬೇಕು. ಈ ಮೂಲಕ ಬಿಜೆಪಿಯವರಿಗೆ ತಾವು ಮಾಡಿರುವುದು 'ತಪ್ಪು ಹಾಗೂ ಕರಾಳ ಕಾನೂನು' ಎಂಬ ಸಂದೇಶ ಮುಟ್ಟಿಸೋಣ ಎಂದು ಶಾಂತಿಯುತ ಪ್ರತಿಭಟನೆಗೆ ಎಐಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಕರೆ ನೀಡಿದ್ದಾರೆ.
![ಬಿಜೆಪಿಗೆ 'ಕರಾಳ ಕಾನೂನು' ಸಂದೇಶ ಕಳುಹಿಸಲು ತ್ರಿವರ್ಣ ಧ್ವಜ ಹಾರಿಸಿ: ಒವೈಸಿ Owaisi calls protest against CAA](https://etvbharatimages.akamaized.net/etvbharat/prod-images/768-512-5453782-thumbnail-3x2-megha.jpg)
ಅಸಾದುದ್ದೀನ್ ಒವೈಸಿ ನೇತೃತ್ವದಲ್ಲಿ ಹೈದರಾಬಾದ್ನ ದಾರುಸ್ಸಲಾಮ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ರ‍್ಯಾಲಿಯಲ್ಲಿ ಭಾಗಿಯಾದ ಜನರು ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಸಿಎಎ ಹಾಗೂ ಎನ್‌ಆರ್‌ಸಿ ವಿರೋಧದ ಪ್ರತಿಭಟನೆಗೆ ನಾಂದಿ ಹಾಡಿದರು. ಶಾಂತಿಯುತವಾಗಿ ಹಾಗೂ ಅಹಿಂಸೆ ಮಾರ್ಗದಲ್ಲಿ ಪ್ರತಿಭಟನೆ ನಡೆಸಿ ಎಂದು ಇದೇ ವೇಳೆ ಒತ್ತಾಯಿಸಿದ ಅಸಾದುದ್ದೀನ್ ಒವೈಸಿ, "ಈ ಹೋರಾಟವು ಕೇವಲ ಮುಸ್ಲಿಮರದಲ್ಲ, ಇಲ್ಲಿ ದಲಿತರು, ಎಸ್‌ಸಿ-ಎಸ್‌ಟಿಗಳು ಸಹ ಇದ್ದಾರೆ. ನಾನು ಹೇಗೆ ದೇಶದ್ರೋಹಿಯಾಗಲು ಸಾಧ್ಯ? ಆಯ್ಕೆ ಮತ್ತು ಹುಟ್ಟಿನಿಂದ ನಾನು ಭಾರತೀಯನಾಗಿದ್ದೇನೆ" ಎಂದು ಹೇಳಿದರು.
ಕೇರಳ ಮೂಲದ ಹಾಗೂ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಲದೀಡಾ ಸಖಲೂನ್ ಮತ್ತು ಆಯಿಷಾ ರೆನ್ನಾ ಅವರೂ ಸಹ ಈರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.