ಭೋಪಾಲ್:ಕೆಲ ದಿನಗಳಿಂದ ಮಧ್ಯ ಪ್ರದೇಶದಲ್ಲಿ ಸೃಷ್ಟಿಯಾಗಿರೋ ರಾಜಕೀಯ ಬಿಕ್ಕಟ್ಟಿಗೆ ಇಂದು ತೆರೆ ಬೀಳು ಸಾಧ್ಯತೆ ಇದೆ. ಮಧ್ಯ ಪ್ರದೇಶ ವಿಧಾನಸಭೆಯಲ್ಲಿ ಸಿಎಂ ಕಮಲ್ನಾಥ್ ವಿಶ್ವಾಸ ಮತಯಾಚಿಸಲು ಸಜ್ಜಾಗಿದ್ದಾರೆ.
ನಿನ್ನೆ ಮಧ್ಯ ಪ್ರದೇಶ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಕಮಲ್ನಾಥ್, ರಾಜ್ಯಪಾಲ ಲಾಲ್ಜಿ ಟಂಡನ್ರನ್ನು ಭೋಪಾಲ್ನ ರಾಜಭವನದಲ್ಲಿ ಭೇಟಿಯಾಗಿದ್ದರು. ವಿಧಾನಸಭೆ ಕಲಾಪ ಆರಂಭವಾಗಿದ್ದು, ಕಮಲ್ನಾಥ್ ಅವರು ಈಗ ವಿಶ್ವಾಸಮತ ಯಾಚಿಸಬೇಕಿದೆ.