ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರದಲ್ಲಿ ನೆರೆಹಾವಳಿ: 22 ಜನರ ರಕ್ಷಣೆ ಮಾಡಿರುವ ಪೊಲೀಸರ ಕಾರ್ಯಕ್ಕೆ ಶ್ಲಾಘನೆ! - ಮಹಾರಾಷ್ಟ್ರ ಗೃಹ ಸಚಿವ

ನೆರೆ ಹಾವಳಿ ಕಾರಣ ಗ್ರಾಮದಲ್ಲಿ ಸಿಕ್ಕಿ ಹಾಕಿಕೊಂಡಿದ್ದ 22 ಜನರ ರಕ್ಷಣೆ ಮಾಡುವಲ್ಲಿ ಪಾಲ್ಗರ್​ ಪೊಲೀಸರು ಯಶಸ್ವಿಯಾಗಿದ್ದು, ಇವರ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Maha minister lauds Palghar cops
Maha minister lauds Palghar cops

By

Published : Aug 6, 2020, 7:34 PM IST

ಪಾಲ್ಗರ್​​​(ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಕೆಲವರ ಜೀವನ ಅಸ್ತವ್ಯಸ್ತಗೊಂಡಿದೆ. ಮನೆ-ಮಠ ಕಳೆದುಕೊಂಡು, ನಿರಾಶ್ರಿತರಾಗಿರುವ ಜನರು ಬೇರೆ ದಿಕ್ಕು ಕಾಣದೇ ತೊಂದರೆಗೆ ಸಿಲುಕಿಕೊಂಡಿದ್ದಾರೆ.

ಇದರ ಮಧ್ಯೆ ಮಹಾರಾಷ್ಟ್ರದ ಪಾಲ್ಗರ್​​​ ಜಿಲ್ಲೆಯ ಮಹಿಳಾ ಪೊಲೀಸ್​ ಪೇದೆ ಹಾಗೂ ಕೆಲ ಸಿಬ್ಬಂದಿ ಬರೋಬ್ಬರಿ 22 ಜನರ ಜೀವ ರಕ್ಷಣೆ ಮಾಡಿದ್ದಾರೆ. ನೆರೆಹಾವಳಿ ಬಂದ ಕಾರಣ ಅವರು ಗ್ರಾಮವೊಂದರಲ್ಲಿ ಸಿಲುಕಿಕೊಂಡಿದ್ದರು. ಈ ವೇಳೆ ಐದು ವರ್ಷದ ಬಾಲಕನೋರ್ವ ಸುಮಾರು 4 ಗಂಟೆಗಳ ಕಾಲ ಮರದ ಮೇಲೆ ಹತ್ತಿ ಕುಳಿತಿದ್ದಾನೆ. ಇವರ ರಕ್ಷಣೆ ಮಾಡುವಲ್ಲಿ ಪಾಲ್ಗರ್​​ಪೊಲೀಸರು​ ಯಶಸ್ವಿಯಾಗಿದ್ದಾರೆ.

ಇದೇ ವಿಷಯವಾಗಿ ಇದೀಗ ಮಹಾರಾಷ್ಟ್ರ ಗೃಹ ಸಚಿವ ಅನಿಲ್​ ದೇಸಮುಖ್ ಟ್ವೀಟ್​ ಮಾಡಿ, ಪೊಲೀಸರ ಕಾರ್ಯಕ್ಕೆ ಶಹಬ್ಬಾಸ್​ಗಿರಿ ನೀಡಿದ್ದಾರೆ.​ಪಾಲ್ಗರ್​ ಪೊಲೀಸ್​​ ಸೂಪರಿಡೆಂಟ್​​ ದತ್ತಾತ್ರೆಯ ಶಿಂದೆ ಹಾಗೂ ಅವರ ಸಿಬ್ಬಂದಿ ಬರೋಬ್ಬರಿ 22 ಜನರ ಜೀವನ ರಕ್ಷಣೆ ಮಾಡಿದ್ದು, ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ.

ಇದರ ಜತೆಗೆ ಅನೇಕ ಟ್ರಾಫಿಕ್​ ಪೊಲೀಸರು ಮಳೆಯಲ್ಲೇ ತಮ್ಮ ಸೇವೆ ಸಲ್ಲಿಸುತ್ತಿದ್ದು, ಅನೇಕ ಸ್ಥಳಗಳಲ್ಲಿ ಉಂಟಾಗುತ್ತಿರುವ ಟ್ರಾಫಿಕ್​ ನಿಯಂತ್ರಣ ಮಾಡುತ್ತಿದ್ದಾರೆ ಎಂದಿದ್ದಾರೆ.

ABOUT THE AUTHOR

...view details