ಕರ್ನಾಟಕ

karnataka

ETV Bharat / bharat

ಅಸ್ಸೋಂನಲ್ಲಿ ಪ್ರವಾಹ: ಸಾವಿನ ಸಂಖ್ಯೆ 66ಕ್ಕೆ ಏರಿಕೆ - undefined

ಅಸ್ಸೋಂನಲ್ಲಿ ಪ್ರವಾಹ ಪರಿಸ್ಥಿತಿಯಿಂದ ಸೋಮವಾರ ಧೂಬ್ರಿ ಮತ್ತು ಧೇರ್ಮಾಜಿ ಜಿಲ್ಲೆಗಳಲ್ಲಿ ಮತ್ತಿಬ್ಬರು ಸಾವನ್ನಪ್ಪಿದ್ದು, ಸತ್ತವರ ಸಂಖ್ಯೆ 66ಕ್ಕೆ ಏರಿದೆ. ಇಂದಿಗೂ ಬ್ರಹ್ಮಪುತ್ರ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ.

ಪ್ರವಾಹ

By

Published : Jul 23, 2019, 8:10 PM IST

ಗುವಾಹತಿ: ಅಸ್ಸೋಂನಲ್ಲಿ ಪ್ರವಾಹ ಪರಿಸ್ಥಿತಿಯಿಂದ ಸೋಮವಾರ ಧೂಬ್ರಿ ಮತ್ತು ಧೇರ್ಮಾಜಿ ಜಿಲ್ಲೆಗಳಲ್ಲಿ ಮತ್ತಿಬ್ಬರು ಸಾವನ್ನಪ್ಪಿದ್ದು, ಸತ್ತವರ ಸಂಖ್ಯೆ 66ಕ್ಕೆ ಏರಿದೆ. ಈ ಪ್ರವಾಹದಿಂದ ಒಟ್ಟು 33 ಜಿಲ್ಲೆಗಳ ಪೈಕಿ 18 ಜಿಲ್ಲೆಗಳ 30.55 ಲಕ್ಷ ಜನರು ಅತಂತ್ರ ಸ್ಥಿತಿಯಲ್ಲಿದ್ದಾರೆ.

ಜಿಲ್ಲಾ ಆಡಳಿತ ಮಂಡಳಿ ಅಧಿಕಾರಿಗಳು 757 ಪರಿಹಾರ ಶಿಬಿರ ಮತ್ತು ಪರಿಹಾರ ವಿತರಣಾ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಈ ಕೇಂದ್ರಗಳಿಗೆ ಒಟ್ಟು 96,890 ಸಂತ್ರಸ್ತರನ್ನು ಸ್ಥಳಾಂತರಿಸಿದ್ದಾರೆ. 18 ಜಿಲ್ಲೆಗಳಲ್ಲಿ 2,283 ಗ್ರಾಮಗಳು ಮತ್ತು 1.14 ಹೆಕ್ಟೇರ್ ಕೃಷಿ ಭೂಮಿ ಸಂಪೂರ್ಣ ಮುಳುಗಿದೆ. ಈಗಲೂ ಬ್ರಹ್ಮಪುತ್ರ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ ಎಂದು ಅಸ್ಸೋಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ.

ಗೋಲಘಾಟ್ ಜಿಲ್ಲೆಯ ಕಾಜಿರಂಗಾ ರಾಷ್ಟ್ರೀಯ ಉದ್ಯಾನ ಶೇ.90ರಷ್ಟು ಮುಳುಗಡೆ ಹೊಂದಿತ್ತು. ಅಲ್ಲಿ 187 ಪ್ರಾಣಿಗಳು ಮೃತಪಟ್ಟಿವೆ. 15 ಖಡ್ಗಮೃಗಗಳು, 103 ಹಾಗ್ ಜಿಂಕೆ, ಒಂದು ಆನೆ, 6 ಜೌಗು ಜಿಂಕೆ, 12 ಸಂಭಾರ್, 2 ನೀರಿನ ಎಮ್ಮೆಗಳು, 13 ಕಾಡುಹಂದಿಗಳು, 3 ಮುಳ್ಳುಹಂದಿಗಳು ಸೇರಿದಂತೆ ಹಲವು ಪ್ರಾಣಿಗಳು ಸಾವನ್ನಪ್ಪಿವೆ ಎಂದು ಅರಣ್ಯ ಮತ್ತು ಪರಿಸರ ಇಲಾಖೆ ಹೇಳಿದೆ. ಎರಡು ಖಡ್ಗಮೃಗಗಳು ಸೇರಿದಂತೆ 64 ಪ್ರಾಣಿಗಳನ್ನು ರಕ್ಷಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮತ್ತೊಂದು ಪೊಬಿಟೋರಾ ವನ್ಯಜೀವಿ ಅಭಯಾರಣ್ಯದಲ್ಲಿ ಒಂದು ಪ್ರಾಣಿಯೂ ಸತ್ತಿಲ್ಲ. ಇದಕ್ಕೆ ಸಿಬ್ಬಂದಿ ಮತ್ತು ಸ್ವಯಂಸೇವಕರ ಕಾರಣ. ಅವರ ಪರಿಶ್ರಮದಿಂದ ಎಲ್ಲ ಪ್ರಾಣಿಗಳು ಜೀವಂತವಾಗಿವೆ. ಅವರು ಸಮಾಜಕ್ಕೆ ಸ್ಫೂರ್ತಿಯಾಗಿದೆ ಎಂದು ರಾಜ್ಯ ಅರಣ್ಯ ಸಚಿವ ಪರಿಮಲ್ ಸುಕ್ಲಾಬೈದ್ಯ ಹೇಳಿದರು.

For All Latest Updates

TAGGED:

ABOUT THE AUTHOR

...view details