ಬಿಹಾರ:ಜಿಲ್ಲೆಯ ಕೇಸರಿಯಾದಲ್ಲಿರುವ ಬೌದ್ಧ ಸ್ತೂಪ ಸಂಕೀರ್ಣದೊಳಗೆ ನೀರು ನುಗ್ಗಿದೆ. ಸಂಕೀರ್ಣದ ಒಳಗೆ ಮತ್ತು ಹೊರಗೆ ಪ್ರವಾಹದ ನೀರು ತುಂಬಿದೆ.
ಇಡೀ ಸಂಕೀರ್ಣದಲ್ಲಿ ಎರಡೂವರೆಯಿಂದ ಐದು ಅಡಿಗಳವರೆಗೆ ನೀರು ಇದೆ. ವಿಶ್ವದ ಅತಿ ಎತ್ತರದ ಬೌದ್ಧ ಸ್ತೂಪವು ನೀರಿನ ಮಧ್ಯೆ ನಿಂತಿರುವ ದಿಬ್ಬದಂತೆ ಕಂಡು ಬರುತ್ತಿದೆ.
ಸಂಗ್ರಾಂಪುರ ಬ್ಲಾಕ್‌ನ ಭಾವನಿಪುರ ಬಳಿಯ ಗಂಡಕ್ ನದಿಯ ಚಂಪಾರಣ್ ನದಿಪಾತ್ರದ ಪ್ರದೇಶಗಳಲ್ಲಿ ಉಂಟಾದ ಪ್ರವಾಹದಿಂದಾಗಿ ಹಲವಾರು ಬ್ಲಾಕ್‌ಗಳು ಹಾನಿಗೊಳಗಾಗಿವೆ.