ಗುವಾಹಟಿ:ಕಳೆದ ಕೆಲ ದಿನಗಳಿಂದ ಅಸ್ಸೋಂನಲ್ಲಿ ನಿರಂತರವಾಗಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಪ್ರವಾಹದಿಂದ ರಕ್ಷಿಸಿಕೊಳ್ಳಲು ಪ್ರಾಣಿಗಳು ಮಾನವರ ವಾಸಸ್ಥಳಗಳಲ್ಲಿ ಆಶ್ರಯ ಪಡೆದುಕೊಳ್ಳುತ್ತಿವೆ.
ಪ್ರವಾಹಕ್ಕೆ ಹೆದರಿ ಹಸುವಿನ ಶೆಡ್ನಲ್ಲಿ ಆಶ್ರಯ ಪಡೆದಿದ್ದ ಹುಲಿಗಳ ರಕ್ಷಣೆ - ಕಾಜಿರಂಗ ರಾಷ್ಟ್ರೀಯ ಉದ್ಯಾನವನ
ಹಸುವಿನ ಶೆಡ್ನಲ್ಲಿ ಆಶ್ರಯ ಪಡೆದುಕೊಂಡಿದ್ದ ಹುಲಿಯನ್ನು ರಕ್ಷಣೆ ಮಾಡುವಲ್ಲಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
Flood forces tigress from Kaziranga
ಇದೀಗ ಮೂರು ಹುಲಿಗಳು ಹಸುವಿನ ಶೆಡ್ನಲ್ಲಿ ಆಶ್ರಯ ಪಡೆದುಕೊಂಡಿದ್ದು, ಅವುಗಳನ್ನು ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ರಾಷ್ಟ್ರೀಯ ಉದ್ಯಾನವನದಲ್ಲಿನ ಹುಲಿಗಳು ಇದೀಗ ಪ್ರವಾಹದ ಕಾರಣ ಮಾನವರು ವಾಸಿಸುತ್ತಿರುವ ಸ್ಥಳಗಳಲ್ಲಿ ಆಶ್ರಯ ಪಡೆದುಕೊಳ್ಳುತ್ತಿದ್ದು, ಇದರಿಂದ ಜನರು ಭೀತಿಗೊಳಗಾಗಿದ್ದಾರೆ.