ಕರ್ನಾಟಕ

karnataka

ETV Bharat / bharat

ಫ್ಲಿಪ್​ಕಾರ್ಟ್​​ 'ಬಿಗ್​ ಬಿಲಿಯನ್​​​ ಡೇ' ಸೇಲ್​.... ಈ ಸ್ಮಾರ್ಟ್​​ ಫೋನ್​ಗಳ ಬೆಲೆಯಲ್ಲಿ ಭಾರಿ ರಿಯಾಯಿತಿ! - ಬಿಗ್​ ಬಿಲಿಯನ್​​​ ಡೇ ಸೇಲ್​​

ಬಿಗ್​ ಬಿಲಿಯನ್​ ಡೇ ಸೇಲ್​​ನಲ್ಲಿ ಕೆಲವೊಂದು ಕಂಪನಿ ಸ್ಮಾರ್ಟ್​​ಫೋನ್​ಗಳು ಭಾರಿ ರಿಯಾಯಿತಿಯೊಂದಿಗೆ ಗ್ರಾಹಕರ ಕೈಗೆ ಲಭ್ಯವಾಗಲಿದ್ದು, ಈಗಾಗಲೇ ಕೆಲವೊಂದು ಮೊಬೈಲ್​ಗಳ ಬೆಲೆ ಎಷ್ಟು ಎಂಬ ಮಾಹಿತಿ ಬಹಿರಂಗಗೊಂಡಿದೆ.

ಸಾಂದರ್ಭಿಕ ಮೊಬೈಲ್​ ಚಿತ್ರ

By

Published : Sep 26, 2019, 9:15 PM IST

ಮುಂಬೈ:ಸೆಪ್ಟೆಂಬರ್​​​ 29ರಿಂದ ಅಕ್ಟೋಬರ್​​ 4ರವರೆಗೆ ನಡೆಯಲಿರುವ ಫ್ಲಿಪ್​ಕಾರ್ಟ್​ ಬಿಗ್​ ಬಿಲಿಯನ್​ ಡೇ ಸೇಲ್​​ನಲ್ಲಿ ಕೆಲವೊಂದು ಸ್ಮಾರ್ಟ್​​ ಪೋನ್​ಗಳು ಅತಿ ಕಡಿಮೆ ದರದಲ್ಲಿ ಗ್ರಾಹಕರ ಕೈ ಸೇರಿಕೊಳ್ಳಲಿವೆ.

ಈಗಾಗಲೇ ಲಭ್ಯವಾಗಿರುವ ಮಾಹಿತಿ ಪ್ರಕಾರ ಕೆಲವೊಂದು ಮೊಬೈಲ್​ ಫೋನ್​ಗಳ ಮೇಲೆ ಶೇ 25ರಷ್ಟು ರಿಯಾಯಿತಿ ಲಭ್ಯವಾಗಲಿದೆ. ಮುಖ್ಯವಾಗಿ 13,999 ರೂಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ Motorola One Action ಮೊಬೈಲ್​​ 11,999 ರೂಗೆ ಲಭ್ಯವಾಗಲಿದ್ದು, Motorola One Vision ಮೊಬೈಲ್​​ 5 ಸಾವಿರ ರೂ ರಿಯಾಯಿತಿಯೊಂದಿಗೆ 14,999 ರೂಗೆ ಲಭ್ಯವಾಗಲಿದೆ.

Moto G7 ಮೊಬೈಲ್​ ಮೇಲೆ 7,500 ರೂ ಕಡಿತದೊಂದಿಗೆ 16,999 ರೂಗೆ,Lenovo Z6 Pro ಮೇಲೆ 3 ಸಾವಿರ ಕಡಿತದೊಂದಿಗೆ 31,999ರೂಗೆ,Lenovo A6 Note ಮೇಲೆ 1 ಸಾವಿರ ರೂ ಕಡಿತಗೊಂಡು 6 ಸಾವಿರಕ್ಕೆ ಲಭ್ಯವಾಗಲಿದೆ. ಉಳಿದಂತೆ Lenovo K10 Note ಮೇಲೆ 2 ಸಾವಿರ ಕಡಿತ,Lenovo K9 ಮೊಬೈಲ್​ ಬೆಲೆಯಲ್ಲಿ 500ರೂ ಕಡಿತ ಮಾಡಲಾಗಿದೆ. ಇದರ ಜತೆಗೆ ರಿಯಲ್​ಮಿ, ಶಿಯೋಮಿ ಸ್ಮಾರ್ಟ್​ಫೋನ್​ಗಳ ಮೇಲೆ ಭರ್ಜರಿ ಡಿಸ್ಕೌಂಟ್​ ನೀಡುತ್ತಿದೆ.

ABOUT THE AUTHOR

...view details