ಕೊಯಮತ್ತೂರು : ಲಾಕ್ ಡೌನ್ ಹಿನ್ನೆಲೆ ದುಬೈನಲ್ಲಿ ಬಾಕಿಯಾಗಿದ್ದ 180 ಭಾರತೀಯರು ವಂದೇ ಭಾರತ್ ಮಿಷನ್ನ ಏರ್ ಇಂಡಿಯಾ ವಿಮಾನದಲ್ಲಿ ಬುಧವಾರ ಮುಂಜಾನೆ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ..
ದುಬೈನಿಂದ ಕೊಯಮತ್ತೂರಿಗೆ ಬಂದಿಳಿದ 180 ಭಾರತೀಯರು - ದುಬೈನಿಂದ ಕೊಯಮತ್ತೂರಿಗೆ ಬಂದಿಳಿದ 180 ಭಾರತೀಯರು
ಎರಡು ತಿಂಗಳ ಬಳಿಕ ಮೊದಲ ಏರ್ ಇಂಡಿಯಾ ಎಕ್ಸ್ಪ್ರೆಸ್ ಐಎಕ್ಸ್ 1611 ವಿಮಾನ ಬುಧವಾರ ಮುಂಜಾನೆ ದುಬೈನಿಂದ ಕೊಯಮತ್ತೂರಿಗೆ ಆಗಮಿಸಿದ್ದು, 94 ಪುರುಷರು, 66 ಮಹಿಳೆಯರು 17 ಮಕ್ಳಳು ಮತ್ತು ಮೂವರು ಕಂದಮ್ಮಗಳು ಸೇರಿ ಒಟ್ಟು 180 ಜನ ತಾಯ್ನಾಡು ತಲುಪಿದ್ದಾರೆ.
ಎರಡು ತಿಂಗಳ ಬಳಿಕ ಆಗಮಿಸಿದ ಮೊದಲ ಏರ್ ಇಂಡಿಯಾ ಎಕ್ಸ್ಪ್ರೆಸ್ ಐಎಕ್ಸ್ 1611 ವಿಮಾನದಲ್ಲಿ 94 ಪುರುಷರು, 66 ಮಹಿಳೆಯರು 17 ಮಕ್ಳಳು ಮತ್ತು ಮೂವರು ಕಂದಮ್ಮಗಳು ತಾಯ್ನಾಡು ತಲುಪಿದ್ದಾರೆ. ವಿಮಾನದಲ್ಲಿ ಆಗಮಿಸಿದ ಹೆಚ್ಚಿನ ಪ್ರಯಾಣಿಕರು ತಮಿಳುನಾಡಿನವರಾಗಿದ್ದು, ಕರ್ನಾಟಕ ಮತ್ತು ಪುದುಚೇರಿಯವರು ಇದ್ದರು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಕೋವಿಡ್ ಪರೀಕ್ಷೆಗಾಗಿ ಎಲ್ಲರ ಸ್ಯಾಂಪಲ್ಸ್ ಸಂಗ್ರಹಿಸಲಾಗಿದೆ ಮತ್ತು ಎಲ್ಲರನ್ನೂ ಒಂದು ವಾರದ ಸಾಂಸ್ಥಿಕ ಕ್ವಾರಂಟೈನ್ಗೆ ಕಳುಹಿಸಲಾಗಿದೆ. ಕ್ವಾರಂಟೈನ್ಗಾಗಿ ಹೋಟೆಲ್ ಅಥವಾ ಇತರ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿತ್ತು. ಕ್ವಾರಂಟೈನ್ ಕೇಂದ್ರದ ಖರ್ಚು ಪ್ರಯಾಣಿಕರೇ ಭರಿಸಬೇಕಾಗಿದ್ದು, ಕ್ವಾರಂಟೈನ್ ವೇಳೆ ಯಾರಿಗಾದೂ ಪಾಸಿಟಿವ್ ಬಂದರೆ ಆಸ್ಪತ್ರೆಗೆ ಶಿಫ್ಟ್ ಮಾಡಲು ಕ್ರಮಕೈಗೊಳ್ಳಲಾಗಿದೆ.