ಕರ್ನಾಟಕ

karnataka

ETV Bharat / bharat

ಎರ್ನಾಕುಲಂ: ಫ್ಲ್ಯಾಟ್‌ನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಗೃಹಿಣಿ ಕೆಳಗೆ ಬಿದ್ದು ಸಾವು - ತಮಿಳುನಾಡಿನ ಸೇಲಂ ಮೂಲದ ಕುಮಾರಿ ಸಾವು

ಡಿಸೆಂಬರ್ 5 ರಂದು ಕೊಚ್ಚಿಯ ಆರನೇ ಮಹಡಿಯಿಂದ ಸೀರೆಯನ್ನು ನೇತುಹಾಕಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಮಹಿಳೆವೋರ್ವಳು ಗಂಭೀರವಾಗಿ ಗಾಯಗೊಂಡಿದ್ದಳು. ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾಳೆ.

flat
ಫ್ಲ್ಯಾಟ್‌

By

Published : Dec 13, 2020, 4:16 PM IST

ಎರ್ನಾಕುಲಂ: ಕೊಚ್ಚಿಯ ಫ್ಲ್ಯಾಟ್‌ನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಮಹಿಳೆವೋರ್ವಳು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ನಡೆದಿದೆ.

ತಮಿಳುನಾಡಿನ ಸೇಲಂ ಮೂಲದ ಕುಮಾರಿ (55) ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ಡಿಸೆಂಬರ್ 5 ರಂದು ಆರನೇ ಮಹಡಿಯಿಂದ ಸೀರೆಯನ್ನು ನೇತುಹಾಕಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು ಎಂದು ತಿಳಿದುಬಂದಿದೆ.

ಕೊಚ್ಚಿಯ ಫ್ಲ್ಯಾಟ್

ತಮಿಳುನಾಡಿನ ಸೇಲಂ ಮೂಲದ ಕುಮಾರಿ ಸಾವು

ತಲೆ ಮತ್ತು ಕಾಲಿಗೆ ಗಂಭೀರವಾಗಿ ಗಾಯವಾದ ಪರಿಣಾಮ ಕುಮಾರಿ, ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಪಡೆಯುತ್ತಿದ್ದರು. ಪೊಲೀಸರು ಫ್ಲಾಟ್ ಮಾಲೀಕರು ಮತ್ತು ಸಂಬಂಧಿಕರಿಂದ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ. ಘಟನೆಯಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದ್ದಾರೆ.

ಓದಿ:ಬರಲಿದೆ ಮತ್ತೊಂದು ಕ್ರೀಡಾ ಬಯೋಪಿಕ್: ಚೆಸ್​ ದಂತಕತೆಯ ಸಿನಿಮಾಗೆ ಬಾಲಿವುಡ್​​ ಸಿದ್ಧತೆ

ಘಟನೆಯಲ್ಲಿ ಅನುಮಾನವಿದೆ ಹಾಗು ಫ್ಲ್ಯಾಟ್ ಮಾಲೀಕರು ಅವಳನ್ನು ಮಾನಸಿಕವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿ ಕುಮಾರಿ ಪತಿ ಪೊಲೀಸರಿಗೆ ದೂರು ನೀಡಿದ್ದರು.

ಕುಮಾರಿ ಬಹಳ ಸಮಯದಿಂದ ಅದೇ ಫ್ಲ್ಯಾಟ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಫ್ಲ್ಯಾಟ್ ಮಾಲೀಕರ ಅರಿವಿಲ್ಲದೆ ಅವರು ತಪ್ಪಿಸಿಕೊಳ್ಳಲು ಯತ್ನಿಸಿದ್ದು ಹೇಗೆ? ಎಂಬ ಅನುಮಾನವೂ ವ್ಯಕ್ತವಾಗಿದೆ.


ABOUT THE AUTHOR

...view details