ಕರ್ನಾಟಕ

karnataka

ETV Bharat / bharat

ಹಗ್ಗ ಮಾರಾಟಕ್ಕೆ ಬಂದ ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿತ..! ಕಾರಣ..?

ಐದು ಮಹಿಳೆಯರು ಹಗ್ಗ ಮಾರಾಟ ಮಾಡಲು ಶಾಮ್ಲಿ ಜಿಲ್ಲೆಯ ಕೈರಾನಾಗೆ ಆಗಮಿಸಿದ್ದ ವೇಳೆ ಸ್ಥಳೀಯರು ಮಕ್ಕಳ ಕಳ್ಳರು ಎಂದು ತಪ್ಪಾಗಿ ಭಾವಿಸಿ ಈ ಮಹಿಳೆಯರ ಮೇಲೆ ಹಲ್ಲೆ ಮಾಡಿದೆ.

ಹಲ್ಲೆ

By

Published : Aug 27, 2019, 1:27 PM IST

ಶಾಮ್ಲಿ(ಉತ್ತರ ಪ್ರದೇಶ):ಶಾಮ್ಲಿ ಜಿಲ್ಲೆಯ ಕೈರಾನಾದಲ್ಲಿ ಮಕ್ಕಳ ಕಳ್ಳತನದ ಅನುಮಾನದ ಮೇಲೆ ಐದು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಪ್ರಕರಣ ವರದಿಯಾಗಿದೆ.

ಐದು ಮಹಿಳೆಯರು ಹಗ್ಗ ಮಾರಾಟ ಮಾಡಲು ಶಾಮ್ಲಿ ಜಿಲ್ಲೆಯ ಕೈರಾನಾಗೆ ಆಗಮಿಸಿದ್ದ ವೇಳೆ ಸ್ಥಳೀಯರು ಮಕ್ಕಳ ಕಳ್ಳರು ಎಂದು ಭಾವಿಸಿ ಈ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ.

ಹಲ್ಲೆ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಿಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಪೊಲೀಸರು ಮಹಿಳೆಯರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಸ್ಥಳೀಯರಿಂದ ಹಗ್ಗ ಮಾರಾಟ ಮಾಡುತ್ತಿದ್ದ ಮಹಿಳೆಯರ ಮೇಲೆ ಹಲ್ಲೆ

ಮಹಿಳೆಯರು ಇಲ್ಲಿ ಹಗ್ಗ ಮಾರಾಟ ಮಾಡುತ್ತಿದ್ದ ವೇಳೆ ಸ್ಥಳೀಯರು ಈ ಮಹಿಳೆಯರನ್ನು ಮಕ್ಕಳ ಕಳ್ಳರ ಗುಂಪು ಎಂದು ಭಾವಿಸಿ ಸುತ್ತಮುತ್ತಲಿನ ಜನರಿಗೆ ಸುದ್ದಿ ರವಾನಿಸಿದ್ದಾರೆ.

ತಕ್ಷಣ ಅಲರ್ಟ್​ ಆದ ಸ್ಥಳೀಯರು ಹಗ್ಗ ಮಾರಾಟ ಮಾಡುತ್ತಿದ್ದ ಮಹಿಳೆಯರ ಮೇಲೆ ಹಲ್ಲೆ ನಡೆಸಿದೆ. ಹಲ್ಲೆಗೊಳಗಾಗದ ಮಹಿಳೆಯರನ್ನು ಠಾಣೆಗೆ ಕರೆದೊಯ್ದರೂ ಸ್ಥಳೀಯರ ಕೋಪ ಕಡಿಮೆಯಾಗಿರಲಿಲ್ಲ. ನಂತರ ಪೊಲೀಸರು ಸಣ್ಣ ಪ್ರಮಾಣದಲ್ಲಿ ಲಾಠಿಚಾರ್ಜ್​ ನಡೆಸಿ ಗುಂಪನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಿಸಬೇಕಾಯಿತು.

ABOUT THE AUTHOR

...view details